ಗೈರೊವೇಟರ್ SLX | ಕೃಷಿ ಅಳವಡಿಕೆಗಳು | ಕೃಷಿಕ್ಷೇತ್ರ ಉಪಕರಣ | ಮಹೀಂದ್ರ ಟ್ರ್ಯಾಕ್ಟರ್‌ಗಳು

ಗೈರೋವೇಟರ್ Slx

ಮಹೀಂದ್ರ ಗೈರೋವೇಟರ್ SLX ಒಂದು ಟ್ರಾಕ್ಟರ್ ಮೌಂಟ್ ಆಗಿರುವ ಮತ್ತು PTO ಚಾಲಿತ ಅಳವಡಿಕೆಯಾಗಿದೆ. ಒಂದೇ ಸಮಯದಲ್ಲಿ ಅದು 3 ಕೆಲಸವನ್ನು ಮಾಡುತ್ತದೆ. ಅಂದರೆ ಮಣ್ಣನ್ನು ಕತ್ತರಿಸುವುದು, ಮಿಶ್ರ ಮಾಡುವುದು ಮತ್ತು ಸಮತಟ್ಟು ಮಾಡುವುದು. SLX ಸೀರೀಸ್ ಒಂದು ಅತಿಯಾಗಿ ಉಪಯೋಗವೆನಿಸುವ ಮತ್ತು ಭಾರವಾದ ಮತ್ತು ಅಂಟಿಕೊಳ್ಳುವ ಮಣ್ಣುಗಳಿಗಾಗಿದೆ.

 
   
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

 • ಗೈರೋವೇಟರ್ ಶಾಫ್ಟ್ ನ 4 ವಿವಿಧ ವೇಗಕ್ಕಾಗಿ ಸ್ಪೆಷಲ್ ಗೇರ್.
 • ವಿವಿಧ ಅಳವಡಿಕೆಗಾಗಿ ಬಹು ಸ್ಪೀಡ್ ಅಡ್ಜಸ್ಟರ್.

 • ಶಬ್ದರಹಿತ ಮತ್ತು ಸುಲಭ ಕೆಲಸಕ್ಕಾಗಿ ಅಂತಾರಾಷ್ಟ್ರೀಯವಾಗಿ ವಿನ್ಯಾಸಗೊಳಿಸಲ್ಪಟ್ಟ ಶ್ರೇಣಿ.
 • ಯಾವುದೇ ನಿರ್ವಹಣಾ ಸಮಸ್ಯೆಯಿಲ್ಲ: ದೀರ್ಘಬಾಳಿಕೆ

 • ವಿವಿಧ ಅಪ್ಲಿಕೇಶನ್ ಗಳಿಗೆ ಸೂಕ್ಷ್ಮವಾಗಿ ಆಳವನ್ನು ಹೊಂದಿಸುತ್ತದೆ.
 • ಒಂದೇ ಗ್ಯಾಂಗ್ ಶಾಫ್ಟ್ ನಲ್ಲಿ ಉತ್ತಮ ಸಾಮರ್ಥ್ಯಕ್ಕಾಗಿ ಬಹು ಬ್ಲೇಡ್ ಹೊಂದಾಣಿಕೆ (ಐ&ಸಿ ವಿಧ)

 • ಗೈರೋವೇಟರ್ ನಿಂದ ಮೇಲ್ಮೈ ಮಟ್ಟಸಗೊಳಿಸುವುದರಿಮ್ದ ಉತ್ತಮ ಇಂಧನ ಸಾಮರ್ಥ್ಯ ನೀಡುತ್ತದೆ.
 • ವಾಟರ್ ಟೈಟ್ ಸೀಲಿಂಗ್ ತೇವ ಮತ್ತು ಒಣಭೂಮಿಯಲ್ಲಿ ಉತ್ತಮ ಬಳಕೆಗೆ ನೆರವಾಗುತ್ತದೆ.

 • ಮಣ್ಣಿನ ಮೇಲೆ ಕಡಿಮೆ ಒತ್ತಡದ ಕಾರಣ ಗಾಳಿ ಮತ್ತು ನೀರಿನ ಉತ್ತಮ ಮಿಶ್ರಣಕ್ಕೆ ನೆರವಾಗುತ್ತದೆ
 • ಅಕ್ಕಿ/ಭತ್ತದ ಕೊಯ್ಲಿನ ನಂತರ, ಇದು ಉಳಿದ ಬೆಳೆಯನ್ನು ಅರೆಯುವ ಮೂಲಕ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತದೆ.

 • ಅತ್ಯುತ್ತಮ ಕತ್ತರಿಸುವಿಕೆ ಮತ್ತು ಹೊಟ್ಟಿನ ಮಿಶ್ರಣ ಹಾಗೂ ಗೊಬ್ಬರಗಳನ್ನು ಉತ್ತಮವಾಗಿ ಮಿಶ್ರ ಮಾಡುತ್ತದೆ. ಗೊಬ್ಬರವನ್ನು ಸೂಕ್ಷ್ಮ ಕಣಗಳಾಗಿ ಎಂದರೆ ಉತ್ತಮ ಉಳುವಿಕೆಯಾಗಿ ಜಜ್ಜುತ್ತದೆ.
 • ಮಣ್ಣನ್ನು ಉತ್ತಮವಾಗಿ ಅರೆಯುವುದರಿಂದ ಪುಡಿಮಾಡಲು ಪರಿಣಾಮಕಾರಿಯಾಗಿದ್ದು ಪಡ್ಲರ್/ಡಿಸ್ಕ್ ಹಾರೋಗೆ ಹೋಲಿಸಿದರೆ ಕಡಿಮೆ ಜಾರುವಿಕೆ

 • ಹೊಂದಿಸಬಹುದಾದ ಟ್ರೈಲಿಂಗ್ ಬೋರ್ಡ್.

ವಿಶೇಷಣಗಳು

ಮಾದರಿಗಳು SLX 150 SLX 175 SLX 200
ಕಾರ್ಯದ ಅಗಲ 1.5 m 1.75 m 2.0 m
ಕತ್ತರಿಸುವ ಅಗಲ 1.46 m 1.70 m 1.96 m
ಫ್ಲ್ಯಾಜ್ ಗಳ ಸಂಖ್ಯೆ 7 8 9
ಅಲುಗುಗಳ ಸಂಖ್ಯೆ 36 42 48
ಅಲುಗುಗಳ ವಿಧ L-ವಿಧ L-ವಿಧ L-ವಿಧ
ತೂಕ 460 (ಅಂದಾಜು.) 500 (ಅಂದಾಜು.) 520 (ಅಂದಾಜು.)
ಪ್ರಾಥಮಿಕ ಗೇರ್ ಬಾಕ್ಸ್ ಮಲ್ಟಿ ಸ್ಪೀಡ್ ಮಲ್ಟಿ ಸ್ಪೀಡ್ ಮಲ್ಟಿ ಸ್ಪೀಡ್
ದ್ವಿತೀಯ ಗೇರ್ ಬಾಕ್ಸ್ ಗೇರ್ ಡ್ರೈವ್ ಗೇರ್ ಡ್ರೈವ್ ಗೇರ್ ಡ್ರೈವ್
ಅಗತ್ಯವಿರುವ ಟ್ರ್ಯಾಕ್ಟರ್ HP 45-50 50-55 55-60

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

 • ಮಹೀಂದ್ರ ಟ್ರ್ಯಾಕ್ಟರು ಗೈರೋವೇಟರಿಗೆ ಸಮಗಟ್ಟುವ ಸೂಕ್ತ ವೇಗ ಹಾಗೂ ಎಳೆಯುವ ಶಕ್ತಿಯನ್ನು ಒದಗಿಸುತ್ತದೆ.
 • ಕಡಿಮೆ ಇಂಧನದ ವಿನಿಯೋಗ.

 • ಶುಷ್ಕ ಹಾಗೂ ತೇವಭರಿತ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮಣ್ಣಿನ ಹುಡಿಮಾಡುವಿಕೆ.