Laser Land Leveler | Agricultural Implements | Farm Implements | Mahindra Tractors

ಲೇಸರ್ ಲವೆಲರ್

ಮಣ್ಣಿನ ಹೊರಮೈಯ ಅಸಮ ಪರಿಸರವು ಬೆಳೆ ಮೊಳಕೆಯೊಡೆಯುವುದು, ನಿಲ್ಲುವುದು ಮತ್ತು ಬೆಳೆಯ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಮಹೀಂದ್ರ ಆಪಿಟ್ರಾಕ್ ನ ಲೇಸರ್ ಲೆವೆಲರ್ ಇಳಿಜಾರಿನ ನಿರ್ದಿಷ್ಟ ಡಿಗ್ರಿಯಲ್ಲಿ ಹೊಲವನ್ನು ಸಮತಟ್ಟು ಮಾಡುತ್ತದೆ. ಲೇಸರ್ ಲೆವೆಲರ್ ಆಳವಾಗಿ ಮಣ್ಣನ್ನು ಒಂದು ಎತ್ತರದ ಪಾಯಿಂಟುಗಳಿಂದ ತಗ್ಗಿನ ಪಾಯಿಂಟುಗಳಿಗೆ ವರ್ಗಾಯಿಸುತ್ತದೆ. ಹಾಗೆ ಮಣ್ಣಿನ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಮಹೀಂದ್ರಾ ಲೇಸರ್ ಲೆವಲರ್ ನ ಭೂಮಿ ಮಟ್ಟಸ ಮಾಡುವಿಕೆ ನೀರಿನ ಗರಿಷ್ಟ ಬಳಕೆಗೆ ಕಾರಣವಾಗುತ್ತದೆ, ಅಧಿಕ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಕಳೆಯ ವೆಚ್ಚ ಕಡಿಮೆಗೊಳಿಸುತ್ತದೆ.
  • ಹೊಲ ಮಟ್ಟಸ ಮಾಡಲು ಆಧುನಿಕ ಮತ್ತು ನಿಖರ ಲೇಸರ್ ತಂತ್ರಜ್ಞಾನ ಸ್ವಯಂಚಾಲಿತವಾಗಿ ಮಣ್ಣನ್ನು ಮೇಲೆತ್ತಿ ಕೆಳಗೆ ಹಾಕುತ್ತದೆ. ಇದು ಲೆವಲರ್ ನಲ್ಲಿ ಸ್ವಯಂಚಾಲಿತವಾಗಿ ಆಗುವುದಿಲ್ಲ.

  • ಎಲೆಕ್ಟ್ರಿಕ್ ಕಂಟ್ರೋಲ್ ಪ್ಯಾನೆಲ್ ಸಿಗ್ನಲ್ ಬಕೆಟ್ ಸ್ಥಿತಿ ಎಳೆಯುವುದನ್ನು ಸೂಚಿಸುವ ಮೂಲಕ ಅಂತಿಮ ದರ್ಜೆ ತೋರಿಸುತ್ತದೆ.
  • ಇದನ್ನು ದೊಡ್ಡ ಕೃಷಿಭೂಮಿ ಹೊಂದಿರುವ ವಿಶೇಷವಾಗಿ ವಾಣಿಜ್ಯ ಬಳಕೆಯ ಬೆಳೆ ಹೊಂದಿರುವ ರೈತರು ಬಯಸುತ್ತಾರೆ.

  • ಮಣ್ಣಿನ ಸವೆಯುವಿಕೆ ಕಡಿಮೆ ಮಾಡುತ್ತದೆ ಮತ್ತು ಭೂಮಿಯನ್ನು ಸಮಾನವಾಗಿ ಮಟ್ಟಸಮಾಡುವ ಮೂಲಕ ಅಧಿಕ ನೀರು ಸಂಗ್ರಹವಾಗುವುದನ್ನು ಕಡಿಮೆ ಮಾಡುತ್ತದೆ.
  • ಮಣ್ಣಿನ ತೇವಾಂಶ ವಿತರಣೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಮೊಳಕೆಯೊಡೆಯುವಿಕೆಗೆ ಕಾರಣವಾಗುತ್ತದೆ.

  • ಭತ್ತಕ್ಕೆ ಸೂಕ್ಷ್ಮ ಮಟ್ಟಸ ಕಾರ್ಯಗಳಾದ ಬೀಜಹಾಸು ಸಿದ್ಧತೆಗಾಗಿ ಬಳಸಲಾಗುತ್ತದೆ.

ವಿಶೇಷಣಗಳು

 670 mm ವರ್ಗ II
ನಿಖರತೆ1.5 mm/30 m (ಸಕಾರಾತ್ಮಕ ಹಾಗು ನಕಾರಾತ್ಮಕ)
ಎಳೆಯುವ ಬಕೆಟ್ (mm)1980X610X812 mm
ಸಿಲಿಂಡರ್ ವಿಧ2 MJ ಎರಡು ವಿಧವಾಗಿ ಕಾರ್ಯನಿರ್ವಹಿಸುವ ಹೈಡ್ರಾಲಿಕ್ ಸಿಲಿಂಡರ್
ನುಣುಪು ಮಾಡುವ ಅಲುಗುಮಿಶ್ರಲೋಹ ಉಕ್ಕು

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಉತ್ತಮ ಎಳೆಯುವ ಶಕ್ತಿಯು ಕಾರ್ಯಾಚರಣೆಗಳನ್ನು ಪೂರ್ಣಗೊಳಿಸುವ ಸಮಯವನ್ನು ಕಡಿಮೆ ಮಾಡುತ್ತದೆ.
  • ಉತ್ತಮ ಎಸ್ ಎಫ್ ಸಿ ಅದನ್ನು ಬಳಕೆಗೆ ಹೆಚ್ಚು ಮಿತವ್ಯಯಿಯನ್ನಾಗಿಸುತ್ತದೆ.

  • ಟ್ರ್ಯಾಕ್ಟರಿನ ಗರಿಷ್ಟ ಆಕ್ಸಿಲ್ಲರಿ ಹೈಡ್ರಾಲಿಕ್ ಔಟ್ ಪುಟ್, ಲೇಸರ್ ಲೆವೆಲರಿನ ಕಾರ್ಯಾಚರಣೆಯನ್ನು ಹೆಚ್ಚು ದಕ್ಷಗೊಳಿಸುತ್ತದೆ.