Mouldboard Plough | Agricultural Implements | Farm Equipment | Mahindra Tractors

Mb ಪ್ಲಫ್

ಮಹೀಂದ್ರ MB ನೇಗಿಲು ಒಂದು ಟ್ರಾಕ್ಟರ್ ಜೋಡಣೆಯಾಗಿರುವ ಯಂತ್ರವಾಗಿದ್ದು, ಬೀಜ ಬಿತ್ತಲು ಅಥವಾ ಬೆಳೆ ನೆಡಲು ಆರಂಭಿಕ ಮಣ್ಣಿನ ಸಿದ್ಧತೆಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಭೂಮಿಯನ್ನು ಆಳವಾಗಿ ಉಳಲು ಮತ್ತುಭೂಮಿಯ ಮೇಲಿನ ಹೊರಮೈಯನ್ನು ತಲೆಕೆಳಗು ಮಾಡಲು ಬಳಸಲಾಗುತ್ತದೆ. ತಾಜಾ ಪೌಷ್ಠಿಕಾಂಶವನ್ನು ಹೊರಮೈ ಮೇಲೆ ತರಲು, ಕೊಳೆಗಳನ್ನು ಹೂಳುವಾಗ ಮತ್ತು ಹಿಂದಿನ ಬೆಳೆಯ ಉಳಿಕೆಯನ್ನು ಹೂಳುವಾಗ ನೆರವಾಗುತ್ತದೆ. ಇದು ಮಣ್ಣನ್ನು ಫಲವತ್ತುಗೊಳಿಸುತ್ತದೆ ಮತ್ತು ತೇವಾಂಶವನ್ನು ಚೆನ್ನಾಗಿ ಹಿಡಿದಿಡಲು ನೆರವಾಗುತ್ತದೆ ಮತ್ತು ಭಾರವಾದ ಲೋಡ್ ಗಳನ್ನು ಸಹಿಸುವ ದೃಢತೆ ಹೊಂದಿದೆ.

 
   
   
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಸಾವಯವ ಪದಾರ್ಥವನ್ನು ಹೆಚ್ಚಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ
  • ಆಳವಾಗಿ ಒಳಪ್ರವೇಶಿಸಿದ ತೇವಾಂಶದಿಂದ ಮಣ್ಣಿನ ಉಳಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.

  • ಮಣ್ಣಿನ ಪೂರ್ಣ ವ್ಯತಿರಿಕ್ತತೆಯ ಭರವಸೆ ನೀಡುತ್ತದೆ.
  • ಅನಗತ್ಯ ಹುಲ್ಲು ತೆಗೆಯುತ್ತದೆ ಮತ್ತು ಮಣ್ಣಿನ ಒಳಭಾಗದಲ್ಲಿರುವ ಕ್ರಿಮಿಗಳ ಸ್ಥಳದಿಂದ ಪುನರುತ್ಪಾದನೆ ತಡೆಯುತ್ತದೆ.

  • ಉಳುಮೆಯ ಕತ್ತರಿಸಿದ ಉದ್ದವನ್ನು ಗರಿಷ್ಟ ಆವರಿಸುವಿಕೆಗೆ ಹೊಂದಿಸಬಹುದಾಗಿದ್ದು, ಇದು ಕೇವಲ ವೃತ್ತಾಕಾರದ ಅಡ್ಡ ಶಾಫ್ಟ್ ಗೆ ಮಾತ್ರ ಅನ್ವಯ (1”)
  • ಅತ್ಯುತ್ತಮ ಮಣ್ಣಿನ ಪ್ರವೇಶಿಸುವಿಕೆ ಎಂದರೆ ಇದು ಹೆಚ್ಚು ಆಳ ನೀಡುತ್ತದೆ (12-14”). ಆಳವನ್ನು 3 ಪಾಯಿಂಟ್ ಲಿಂಕೇಜ್ ಗಳು ಮತ್ತು ಹೈಡ್ರಾಲಿಕ್ಸ್ ನಿಂದ ಸಂಪರ್ಕಿಸಬಹುದು.

ವಿಶೇಷಣಗಳು

  2 ಅಡಿಭಾಗ MB ನೇಗಿಲು 2 ಅಡಿಭಾಗ MB ನೇಗಿಲು
ಅಡಿಭಾಗಗಳ ಸಂಖ್ಯೆ 2 3
ಹಲುಗೆಯ ಗಾತ್ರ (mm) 305 305
ಕತ್ತರಿಸಿದರ ಸಂಪೂರ್ಣ ಅಗಲ (mm) 610 914
(mm) 305 305
ಒಟ್ಟಾರೆ ಉದ್ದ x ಅಗಲ x ಎತ್ತರ (mm) 1370 x 920 x 1030 1700 X 1140 X 1030
ಒಟ್ಟು ತೂಕ ಕೆಜಿಗಳಲ್ಲಿ (ಅಂದಾಜು) 235 300
ಸೂಕ್ತ HP ಶ್ರೇಣಿ 35 Above 40 Above
ಭಾರವನ್ನು ತಡೆಯುವ ಸಾಮರ್ಥ್ಯ 50 40

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಮಹೀಂದ್ರ ಟ್ರ್ಯಾಕ್ಟರ್ ಎಂ ಬಿ ಪ್ಲೌ (ನೇಗಿಲು) ನೊಂದಿಗಿನ ಕಾರ್ಯಾಚರಣೆಗೆ ಹೆಚ್ಚಿನ ಎಳೆಯುವ ಶಕ್ತಿಯನ್ನು ಒದಗಿಸುತ್ತದೆ.
  • ಕಡಿಮೆ ಆರ್ ಪಿ ಎಂ ನಲ್ಲಿ ಹೆಚ್ಚಿನ ಟಾರ್ಕ್ (1300 ಆರ್ ಪಿ ಎಂ ನಲ್ಲಿ ಸಂಪೂರ್ಣ ಟಾರ್ಕ್) ಹೆಚ್ಚಿನ ಇಂಧನ ದಕ್ಷತೆಯನ್ನು ಒದಗಿಸುತ್ತದೆ.

  • ಮಹೀಂದ್ರ ಟ್ರ್ಯಾಕ್ಟರ್ ಇಂಜಿನ್ನುಗಳು ವಿಶ್ವಾಸಾರ್ಹವಾಗಿದ್ದು, ನಿರ್ವಹಣೆಯ ಅಗತ್ಯ ಅತಿ ಕಡಿಮೆ ಇರುತ್ತದೆ. ಇದು ಎಂಬಿಯೊಂದಿಗೆ ಕಾರ್ಯಾಚರಿಸಲು ಅತ್ಯಂತ ಸೂಕ್ತವಾದುದಾಗಿದೆ.