Sub Soiler | Agricultural Implements | Tractor Attachments | Mahindra Tractors

ಸಬ್ ಸಾಯ್ಲರ್

ಮಹೀಂದ್ರ ಆಪಿಟ್ರಾಕ್ ನ ಸಬ್ ಸಾಯ್ಲರ್ ಒಂದು ಪ್ರಾಥಮಿಕ ಟ್ರಾಕ್ಟರ್ ಆಗಿದ್ದು, ಮಣ್ಣನ್ನು ಸಡಿಲಗೊಳಿಸಲು ಮತ್ತು ಮುರಿಯಲು ಗರಿಷ್ಠ ಆಳವನ್ನು ಕೊಡುತ್ತದೆ. ಬಹುತೇಕ ಟ್ರಾಕ್ಟರ್ ಜೋಡಣೆಯಾಗಿರುವ ಸಾಗುವಳಿ ಸಾಧನಗಳು 6-8" ಆಳ ಮಣ್ಣನ್ನು ಬುಡಮೇಲು ಮಾಡುತ್ತವೆ. ಆದರೆ ಸಬ್ ಸಾಯ್ಲರ್ ಇದರ ದುಪ್ಪಟ್ಟು ಆಳದಲ್ಲಿ ಮಣ್ಣನ್ನು ಸಡಿಲಗೊಳಿಸಿ ಬುಡಮೇಲು ಮಾಡುತ್ತದೆ. ಮಹೀಂದ್ರ ಸಬ್ ಸಾಯ್ಲರ್ 3ರಿಂದ 5 kmph ವೇಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮಣ್ಣಿನ ಸವಕಳಿ ಸಮಸ್ಯೆಯಿರುವ ಎಲ್ಲಾ ಬೆಳೆಗಳಲ್ಲೂ ಬೆಳವಣಿಗೆಯನ್ನು ಸುಧಾರಿಸಲು ನೆರವಾಗುತ್ತದೆ. ವಿನ್ಯಾಸವು ಆಳವಾಗಿ ಉಳಲು ನೆರವಾಗಿ ಮಣ್ಣನ್ನು ಯಾವುದೇ ಇತರ ಉಪಕರಣಕ್ಕೆ ಹೋಲಿಸಿದಲ್ಲಿ ಆಳವಾದ ಮಟ್ಟಗಳಲ್ಲಿ ಸಡಿಲಿಸಲು ನೆರವಾಗುತ್ತದೆ.

 
   
 
 
 
 
 
ಸೂಚನೆ: ಚಿತ್ರವು ಕೇವಲ ಪ್ರಾತಿನಿಧ್ಯದ ಉದ್ದೇಶಗಳಿಗೆ ಮಾತ್ರ.

ವೈಶಿಷ್ಟ್ಯಗಳು

  • ಉಪ ಮಣ್ಣನ್ನು ಉತ್ತಮ ಇಳುವರಿಯ ಫಲಿತಾಂಶ ಪಡೆಯಲು ಮೇಲ್ಮೈಗೆ ತರಲು ಎಲ್ಲಾ ಉಳುಮೆಗಳಿಗಿಂತ ಗರಿಷ್ಟ ಆಳ (18-24”) ನೀಡುತ್ತದೆ.
  • ಅನಗತ್ಯ ಹುಲ್ಲು ತೆಗೆಯುತ್ತದೆ ಮತ್ತು ಮಣ್ಣಿನ ಒಳಭಾಗದಲ್ಲಿರುವ ಕ್ರಿಮಿಗಳ ಸ್ಥಳದಿಂದ ಪುನರುತ್ಪಾದನೆ ತಡೆಯುತ್ತದೆ.

  • ಉಪ ಮಣ್ಣು ಆಳವಾಗಿ ಪ್ರವೇಶಿಸುವುದರಿಂದ ಮಣ್ಣಿನ ತೇವಾಂಶ ಉಳಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದನ್ನು ಬಂಜರು ಭೂಮಿಯಲ್ಲಿ ಕೃಷಿ ಪ್ರಕ್ರಿಯೆಯಲ್ಲಿ ಮೊದಲ ಅಳವಡಿಕೆಯಾಗಿ ಬಳಸಲಾಗುತ್ತದೆ.
  • ಮಹೀಂದ್ರಾ ಟ್ರ್ಯಾಕ್ಟರ್ ನೊಂದಿಗೆ ಬಳಸಿದಾಗ, ಹೆಚ್ಚು ವಿಶ್ವಾಸಾರ್ಹವಾಗಿದ್ದು, ಇಂಜಿನ್ ನಿರ್ವಹಣೆಯನ್ನು ಕಡಿಮೆ ಮಾಡಿ ಇಂಧನ ಮತ್ತು ಸಮಯ ಉಳಿಸುತ್ತದೆ.

ವಿಶೇಷಣಗಳು

  1 ಸಾಲು 2 ಸಾಲು 3 ಸಾಲು
ಕೈಗಳ ಸಂಖ್ಯೆ 1 ಕೈ 2 ಕೈ 3 ಕೈ
ಉದ್ದ (mm) 510 525 825
ಅಗಲ (mm) 660 1200 1500
ಎತ್ತರ (mm) 1060 ಸರಿಪಡಿಸಬಹುದಾದ 1050 ರಿಂದ 1350 ಸರಿಪಡಿಸಬಹುದಾದ 1050 ರಿಂದ 1350
ಟೈನ್ (mm) 150 X 25 150 X 25 150 X 25
ತೂಕ (ಕೆಜಿಗಳು) 65 165 250

ಮಹೀಂದ್ರಾ ಟ್ರಾಕ್ಟರ್ನೊಂದಿಗೆ ಪ್ರಯೋಜನಗಳು

  • ಸಬ್ಸಾಯ್ಲರಿನೊಂದಿಗೆ ಕಾರ್ಯಾಚರಿಸಲು ಮಹೀಂದ್ರ ಟ್ರ್ಯಾಕ್ಟರುಗಳು ಉತ್ತಮ ಎಳೆಯುವ ಶಕ್ತಿಯನ್ನು ಒದಗಿಸುತ್ತವೆ.
  • ಕಡಿಮೆ ಆರ್ ಪಿ ಎಂ ನಲ್ಲಿ ಹೆಚ್ಚಿನ ಟಾರ್ಕ್ (1300 ಆರ್ ಪಿ ಎಂ ನಲ್ಲಿ ಸಂಪೂರ್ಣ ಟಾರ್ಕ್) ಹೆಚ್ಚಿನ ಇಂಧನ ದಕ್ಷತೆಯನ್ನು ಒದಗಿಸುತ್ತದೆ.

  • ಮಹೀಂದ್ರ ಟ್ರ್ಯಾಕ್ಟರುಗಳ ಇಂಜಿನ್ನುಗಳು ವಿಶ್ವಾಸಾರ್ಹವಾಗಿದ್ದು, ನಿರ್ವಹಣೆಯ ಅಗತ್ಯ ಅತಿ ಕಡಿಮೆ ಇರುತ್ತದೆ. ಇದು ಸಬ್ಸಾಯ್ಲರಿನೊಂದಿಗೆ ಕಾರ್ಯಾಚರಿಸಲು ಅತ್ಯಂತ ಸೂಕ್ತವಾದುದಾಗಿದೆ.