ಅರ್ಜುನ್ ನೋವೊ 605 ಡಿಐ-ಎಂಎಸ್

ಅರ್ಜುನ್ ನೋವೊ 605 ಡಿಐ-ಎಂಎಸ್ ಎನ್ನುವುದು ಒಂದು 37.2 kW (49.9 HP) ತಾಂತ್ರಿಕವಾಗಿ ಅತ್ಯಾಧುನಿಕ ಟ್ರಾಕ್ಟರ್ ಆಗಿದೆ. ಅದು ಬಟಾಟೆ ಬೀಜ ಹಾಕುವುದು ಮತ್ತು ಗುಂಡಿ ತೋಡುವುದು ಸೇರಿದಂತೆ 40 ಕೃಷಿ ಚಟುವಟಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಅರ್ಜುನ್ ನೋವೋ 1800ಕೇಜಿ ಎತ್ತುವ ಸಾಮರ್ಥ್ಯ, ಅತ್ಯಾಧುನಿಕ ಸಿಂಕ್ರೊಮೆಶ್ 15ಎಫ್ + 3ಆರ್ ಟ್ರಾನ್ಸಮಿಶನ್ ಮತ್ತು 400 ಗಂಟೆಗಳ ಧೀರ್ಘ ಸೇವಾ ಇಂಟರ್ವವೆಲ್ ಮೊದಲಾದ ಲಕ್ಷಣಗಳನ್ನು ಹೊಂದಿದೆ. ಅರ್ಜುನ್ ನೋವೋ ಏಕರೂಪದ ಮತ್ತು ನಿರಂತರ ಶಕ್ತಿಯನ್ನು ಕನಿಷ್ಠ ಆರ್ ಪಿ ಎಂ ಇಳಿಕೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಮತ್ತು ಮಣ್ಣಿನ ಸ್ಥಿತಿಗಳಲ್ಲಿ ಒದಗಿಸುತ್ತದೆ. ಅದರ ಅಧಿಕ ಭಾರ ಎತ್ತುವ ಹೈಡ್ರಾಲಿಕ್ ಸಿಸ್ಟಂ ಸಾಮರ್ಥ್ಯ ಅದನ್ನು ಹಲವಾರು ಕೃಷಿ ಮತ್ತು ಉತ್ತುವಿಕೆ ಕಾರ್ಯಾಚರಣೆಗಳಿಗೆ ಸೂಕ್ತವಾಗಿ ಮಾಡುತ್ತದೆ. ಕೃಷಿಗಾಗಿಯೇ ತಯಾರಿಸಲಾಗಿರುವ ಆಪರೇಟರ್ ಸ್ಟೇಷನ್, ಕಡಿಮೆ ನಿರ್ವಹಣೆಯ ಅಗತ್ಯ ಮತ್ತು ವಿಭಾಗದಲ್ಲಿಯೇ ಅತ್ಯುತ್ತಮ ದರ್ಜೆಯ ಇಂಧನ ಸಾಮರ್ಥ್ಯ ಮೊದಲಾದವು ಕೆಲವು ಈ ತಾಂತ್ರಿಕವಾಗಿ ಅತ್ಯಾಧುನಿಕ ಟ್ರಾಕ್ಟರಿನ ಪ್ರಮುಖ ವಿಶೇಷಣಗಳು.

ಡೆಮೋ ಅನ್ನು ವಿನಂತಿ ಮಾಡಲು ನಿಮ್ಮ ವಿವರಗಳನ್ನು ಕೆಳಗೆ ನಮೂದಿಸಿ.

 
   
 
 

ನಮ್ಮ ಸಂಖ್ಯೆ ಈಗ ಹೆಚ್ಚು ಮಾಹಿತಿ ಕರೆ ಪಡೆಯಲು

ಟೋಲ್ ಫ್ರೀ ಸಂಖ್ಯೆ: 1800 425 65 76  

ವೈಶಿಷ್ಟ್ಯಗಳು

ಬದಲಿಸಿ. ಇದು ಏನು ಬೇಕಾದರೂ ಮಾಡಬಹುದು.

ಅರ್ಜುನ್ ನೋವೋ ವಿಸ್ತರಿತ ಶ್ರೇಣಿಯ ಕೃಷಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಭಾಯಿಸಬಲ್ಲದು. ಹೊಸ ಹೈ ಮೀಡಿಯಂ- ಲೋ ಟ್ರಾನ್ಸಮಿಶನ್ ವ್ಯವಸ್ಥೆ ಮತ್ತು 15ಎಫ್ + 3 ಆರ್ ಗೇರ್ ಗಳು 7 ಹೆಚ್ಚುವರಿ ವಿಶಿಷ್ಟ ವೇಗಗಳನ್ನು ಕೊಡುತ್ತವೆ.

ಪ್ರತೀ ಗೇರ್ ಬದಲಾವಣೆ ಸರಾಗವಾಗಿರುತ್ತದೆ.

ಅರ್ಜುನ್ ನೋವೋ ಸಿಂಕ್ರೊಮೆಶ್ ಟ್ರಾನ್ಸಮಿಶನ್ ಅನ್ನು ಹೊಂದಿರುವ ಕಾರಣ ಸರಾಗವಾದ ಗೇರ್ ಬದಲಾವಣೆ ಮತ್ತು ಹಿತಕರವಾದ ಚಾಲನೆಯ ಖಾತರಿ ಕೊಡುತ್ತದೆ.ಗೇರ್ ಲಿವರ್ ಯಾವಾಗಲೂ ನೇರ ಸಾಲಿನ ಗ್ರೂವ್ ನಲ್ಲಿ ಸಮಯಕ್ಕೆ ಸರಿಯಾಗಿ ಮತ್ತು ಕರಾರುವಕ್ಕಾದ ಗೇರ್ ಬದಲಾವಣೆಗಾಗಿ ಇರುವಂತೆ ಒಂದು ಗೈಡ್ ಪ್ಲೇಟ್ ಖಾತರಿ ಕೊಡುತ್ತದೆ.

ನಿಖರತೆಯ ಹಂತ? ಹೊಂದಿಕೆಯಾಗುವುದಿಲ್ಲ.

ಅರ್ಜುನ್ ನೋವಾ ವೇಗವಾಗಿ ಪ್ರತಿಕ್ರಿಯಿಸುವ ಹೈಡ್ರಾಲಿಕ್ ಸಿಸ್ಟಂನ್ನು ಹೊಂದಿದ್ದು, ಅದು ಮಣ್ಣಿನ ಸ್ಥಿತಿಯಲ್ಲಿರುವ ಬದಲಾವಣೆಯನ್ನು ಪತ್ತೆ ಹಚ್ಚಿ ಕರಾರುವಕ್ಕಾಗಿ ಮೇಲೆತ್ತುವುದು ಮತ್ತು ಕೆಳಗೆ ಮಾಡುವುದನ್ನು ಮಾಡಿ ಏಕರೂಪದ ಮಣ್ಣನ್ನು ನಿಭಾಯಿಸುತ್ತದೆ.

ನೀವು ಬಯಸಿದಾಗಲೇ ನಿಲ್ಲುತ್ತದೆ.

ಅರ್ಜುನ್ ನೋವೋದ ಮೇಲಿನ ಸ್ತರದ ಬಾಲ್ ಮತ್ತು ರಾಂಪ್ ತಂತ್ರಜ್ಞಾನ ಬ್ರೇಕಿಂಗ್ ವ್ಯವಸ್ಥೆ ಅತಿಯಾದ ವೇಗದ ಸಮಯದಲ್ಲಿ ಸ್ಕಿಡ್ ಬ್ರೇಕಿಂಗ್ ವಿರೋಧಿ ಅನುಭವ ನೀಡುತ್ತದೆ. ಟ್ರಾಕ್ಟರ್ ನ ಎರಡೂ ಭಾಗಗಳಲ್ಲಿ 3 ಬ್ರೇಕುಗಳು ಮತ್ತು ದೊಡ್ಡ ಬ್ರೇಕಿಂಗ್ ಹೊರಮೈ ಜಾಗದಲ್ಲಿ 1252 ಸಿಎಂ2 ಸರಾಗವಾದ ಬ್ರೇಕಿಂಗನ್ನು ಖಾತ್ರಿಪಡಿಸುತ್ತದೆ.

ಕ್ಲಚ್ ವೈಫಲ್ಯ? ಸಮಸ್ಯೆ ಇತಿಹಾಸ ಸೇರಿದೆ.

ವಿಭಾಗದಲ್ಲಿಯೇ ದೊಡ್ಡದಾಗಿರುವ 306 ಸಿಎಂ ಕ್ಲಚ್ ಹೊಂದಿರುವ ಕಾರಣ ಅರ್ಜುನ್ ನೋವೋ ಪ್ರಯತ್ನವೇ ಇಲ್ಲದ ಕ್ಲಚ್ ಚಾಲನೆ ಸಾಧ್ಯವಾಗಿಸುತ್ತದೆ ಮತ್ತು ಕ್ಲಚ್ ಸವೆತ ಮತ್ತು ಮುರಿತವನ್ನು ಕನಿಷ್ಠಗೊಳಿಸುತ್ತದೆ.

ಯಾವುದೇ ಸೀಸನ್ ಆಗಿದ್ದರೂ ಹಾಯಾಗಿರಿ.

ಅರ್ಜುನ್ ನೋವೋದ ಹೈ ಆಪರೇಟರ್ ಸೀಟಿಂಗ್ ಇಂಜಿನಿನ ಬಿಸಿಯಾದ ಗಾಳಿಯನ್ನು ಚಾನಲೈಸ್ ಮಾಡಿ ಟ್ರಾಕ್ಟರ್ ಕೆಳಗಿನಿಂದ ಸಾಗುವಂತೆ ಮಾಡುತ್ತದೆ. ಹಾಗೆ ಚಾಲಕ ಬಿಸಿಯಿಲ್ಲದ ಪರಿಸರದಲ್ಲಿ ಕುಳಿತುಕೊಳ್ಳಬಹುದು.

ಶೂನ್ಯ ಚೋಕಿಂಗ್ ಇರುವ ಏರ್ ಫಿಲ್ಟರ್

ಅರ್ಜುನ್ ನೋವೋದ ಏರ್ ಕ್ಲೀನರ್ ಅದರ ವಿಭಾಗದಲ್ಲಿಯೇ ಅತೀ ದೊಡ್ಡದು. ಅದು ಏರ್ ಫಿಲ್ಟರ್ ಚೋಕಿಂಗನ್ನು ತಡೆಯುತ್ತದೆ ಮತ್ತು ಧೂಳಿನ ಸಂದರ್ಭದಲ್ಲಿ ಬಳಸುವಾಗಲೂ ಟ್ರಾಕ್ಟರಿನ ಸಮಸ್ಯೆಯಿಲ್ಲದ ಚಾಲನೆಯನ್ನು ಖಾತ್ರಿಪಡಿಸುತ್ತದೆ.

ವಿಶೇಷಣಗಳು

ಇಂಜಿನ್
ಕುದುರೆ ಪವರ್ ವರ್ಗ 37.2 kW (49.9 HP)
ಸಿಲಿಂಡರ್ ಸಾಮರ್ಥ್ಯ 4
ವ್ಯತ್ಯಾಸ 3192
ಆರ್ ಪಿ ಎಂ ದರ 2100 r/min
ಏರ್ ಕ್ಲೀನರ್ ಕ್ಲಾಗ್ ಇಂಡಿಕೇಟರ್ ಡ್ರೈ ಟೈಪ್ ಜೊತೆಗೆ
ಕೂಲಿಂಗ್ ವ್ಯವಸ್ಥೆ ಕೂಲಂಟ್ ನ ಒತ್ತಡಪೂರ್ವಕ ಪರಿಚಲನೆ
ಪ್ರಸರಣ
ವಿಧ ಮೆಕಾನಿಕಲ್ ಸಿಂಕ್ರೊಮೆಶ್
ವೇಗಗಳ ಸಂಖ್ಯೆ 15ಎಫ್ + 3 ಆರ್
ಫಾರ್ವರ್ಡ್ ವೇಗ (ಕನಿಷ್ಠ) 1.63/1.69 km/h
ಫಾರ್ವರ್ಡ್ ವೇಗ (ಗರಿಷ್ಠ) 32.4/33.23 km/h
ರಿವರ್ಸ್ ವೇಗ (ಕನಿಷ್ಠ) 3.09/3.18 km/h
ರಿವರ್ಸ್ ವೇಗ (ಗರಿಷ್ಠ) 17.23/17.72 km/h
ಕ್ಲಚ್ ಡ್ಯುಯಲ್ ಡಯಾಫ್ರಮ್ ಟೈಪ್
ಮುಖ್ಯ ಕ್ಲಚ್ 306
ಪಿಟಿಒ ಕ್ಲಚ್ 280
ಪಿಟಿಒ
ಪಿಟಿಒ ಕ್ಲಚ್ 32.4 kW (43.5 HP)
ಪಿಟಿಒ ಎಚ್ ಪಿ ಸ್ಲಿಪ್ಟೊ
ಪಿಟಿಒ ವೇಗ 540+ ಆರ್ / 540+540 ಇ
ಬ್ರೇಕುಗಳು ಮೆಕಾನಿಕಲ್ ಆಯಿಲ್ ತುಂಬಿಕೊಂಡ ಮಲ್ಟಿ ಡಿಸ್ಕ್ ಬ್ರೇಕುಗಳು
ಸ್ಟೀರಿಂಗ್ ಪವರ್ ಸ್ಟೀರಿಂಗ್
ಹೈಡ್ರಾಲಿಕ್ಸ್
ಮೇಲೆತ್ತುವ ಸಾಮರ್ಥ್ಯ 1800 kg
ಪಂಪ್ ಫ್ಲೋ 37
ಆಯಾಮಗಳು
ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯ 60 l
ಉದ್ದ 3660
ಎತ್ತರ 2100/2130
ವೀಲ್ ಬೇಸ್ 2145/2175
ಟೈರ್
ಮುಂದಿನ 7.5-16 (8 ಪಿ ಆರ್ )
ಹಿಂದಿನ 14.9 – 28 / 16.9 – 28 (ಆಯ್ಕೆ)

ಫೋಟೋ ಗ್ಯಾಲರಿ

ಹಕ್ಕುತ್ಯಾಗ: ಈ ಪ್ರೊಡಕ್ಟ್ ಮಾಹಿತಿಯನ್ನು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್. ಇಂಡಿಯಾ ಮೂಲಕ ಒದಗಿಸಲಾಗಿದೆ, ಮತ್ತು ಇದು ಪ್ರಕೃತಿಯಲ್ಲಿ ಸಾಮಾನ್ಯವಾಗಿದೆ. ಮೇಲೆ ಪಟ್ಟಿಮಾಡಲಾದ ನಿರ್ದಿಷ್ಟ ವಿವರಣೆಗಳು, ಬಿಡುಗಡೆಯ ಸಮಯದಲ್ಲಿ ಲಭ್ಯವಿರುವ ಇತ್ತೀಚಿನ ಪ್ರೊಡಕ್ಟ್ ಮಾಹಿತಿಯ ಮೇಲೆ ಆಧರಿತವಾಗಿದೆ. ಕೆಲವು ಚಿತ್ರಗಳನ್ನು ಮತ್ತು ಪ್ರೊಡಕ್ಟ್ ಫೋಟೋಗಳನ್ನು ವಿವರಣೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ ಮತ್ತು ಹೆಚ್ಚಿನ ವೆಚ್ಚದಲ್ಲಿ ಐಚ್ಛಿಕ ಲಗತ್ತನ್ನು ತೋರಿಸಬಹುದು. ಪ್ರೊಡಕ್ಟ್ ಮೇಲಿನ ಅಪ್-ಟು-ಡೇಟ್ ಮಾಹಿತಿಗಾಗಿ ಮತ್ತು ಐಚ್ಛಿಕ ವೈಶಿಷ್ಟ್ಯಗಳು ಮತ್ತು ಜೋಡಣೆಗಳಿಗಾಗಿ ದಯವಿಟ್ಟು ನಿಮ್ಮ ಸ್ಥಳೀಯ ಮಹೀಂದ್ರಾ ಡೀಲರ್ ಅನ್ನು ಸಂಪರ್ಕಿಸಿ.