ಹೆಚ್ಚಾಗಿ ಕೇಳಲಾದ ಪ್ರಶ್ನೆಗಳು

ಮಹೀಂದ್ರಾ ಟ್ರ್ಯಾಕ್ಟರ್ಗಳಿಗೆ ಸಂಬಂಧಿತ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ. ಹೆಚ್ಚಿನ ವಿವರಗಳಿಗಾಗಿ, ನಮ್ಮ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ಅಥವಾ ನಿಮ್ಮ ಸಮೀಪದಲ್ಲಿರುವ ನಮ್ಮ ಡೀಲರ್ ಅವರನ್ನು ಭೇಟಿ ಮಾಡಿ.

ಕೃಷಿಗೆ ಯಾವ ಮಹೀಂದ್ರಾ ಟ್ರ್ಯಾಕ್ಟರ್ ಉತ್ತಮವಾಗಿದೆ? +

ಮಹೀಂದ್ರಾ ಟ್ರ್ಯಾಕ್ಟರ್ಸ್‌ನ ವಿಶಾಲ ಟ್ರ್ಯಾಕ್ಟರ್ ಶ್ರೇಣಿಯು ವಿವಿಧ ಕೃಷಿ ಮತ್ತು ಕೊಯ್ಲು ಅಗತ್ಯಗಳನ್ನು ಪೂರೈಸುತ್ತದೆ. ನಿಮ್ಮ ಜಮೀನಿನ ಮಣ್ಣಿನ ಸ್ಥಿತಿ, ಬಜೆಟ್ ಮತ್ತು ಅಶ್ವಶಕ್ತಿ, ಎಂಜಿನ್ ಮತ್ತು ಎತ್ತುವ (ಲಿಫ್ಟ್) ಸಾಮರ್ಥ್ಯದ ಅಗತ್ಯವನ್ನು ಆಧರಿಸಿ ಮಾಡೆಲ್ ಅನ್ನು ಆರಿಸಿ.

ಮಹೀಂದ್ರಾ ಟ್ರ್ಯಾಕ್ಟರ್‌ಗಳ ಬೆಲೆ ಶ್ರೇಣಿ ಯಾವುದು? +

ಮಹೀಂದ್ರಾ ಟ್ರ್ಯಾಕ್ಟರ್ಗಳ ಬೆಲೆಯು ಟ್ರ್ಯಾಕ್ಟರ್ ಪ್ರಕಾರ, ಕನಿಷ್ಠ ಪಾವತಿ (ಡೌನ್ ಪೇಮೆಂಟ್), ಹಣಕಾಸು ಮತ್ತು ಇತರ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಟ್ರ್ಯಾಕ್ಟರ್ ಬೆಲೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ ಅಥವಾ ನಿಮ್ಮ ಹತ್ತಿರದ ಮಹೀಂದ್ರಾ ಡೀಲರ್ಶಿಪ್ಗೆ ಭೇಟಿ ನೀಡಿ.

ಮಹೀಂದ್ರಾ ಟ್ರ್ಯಾಕ್ಟರ್‌ಗಳಲ್ಲಿ ಪವರ್ ಸ್ಟೀರಿಂಗ್ ಆಯ್ಕೆ ಲಭ್ಯವಿದೆಯೇ? +

ಹೌದು, ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯ ಪವರ್ ಸ್ಟೀರಿಂಗ್ ಆಯ್ಕೆಯು ಟ್ರ್ಯಾಕ್ಟರ್ಗಳನ್ನು ಚಲಾಯಿಸುವುದನ್ನು ಸುಲಭಗೊಳಿಸುತ್ತದೆ. ಪವರ್ ಸ್ಟೀರಿಂಗ್ ಆಯ್ಕೆಗಳಿರುವ ಮಹೀಂದ್ರಾ ಸಂಸ್ಥೆಯ ಟ್ರ್ಯಾಕ್ಟರ್ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

  • ಮಹೀಂದ್ರಾ ಜಿವೊ: ಪವರ್ ಸ್ಟೀರಿಂಗ್
  • ಮಹೀಂದ್ರಾ XP ಪ್ಲಸ್: ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್
  • ಮಹೀಂದ್ರಾ SP ಪ್ಲಸ್: ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್
  • ಮಹೀಂದ್ರಾ ಯುವೊ: ಪವರ್ ಸ್ಟೀರಿಂಗ್
  • ಅರ್ಜುನ್ ನೋವೊ: ಪವರ್ ಸ್ಟೀರಿಂಗ್, ಡಬಲ್ ಆಕ್ಟಿಂಗ್ ಪವರ್ ಸ್ಟೀರಿಂಗ್

ಮಹೀಂದ್ರಾ ಟ್ರ್ಯಾಕ್ಟರ್‌ಗಳ HP ಶ್ರೇಣಿ ಯಾವುದು? +

ಮಹೀಂದ್ರಾ ಟ್ರ್ಯಾಕ್ಟರ್ಸ್ 15ರಿಂದ 74 HP ವರೆಗಿನ ವಿವಿಧ ಮಾಡೆಲ್ಗಳನ್ನು ತಯಾರಿಸುತ್ತದೆ. 20 HP ಒಳಗಿನ ಮಹೀಂದ್ರಾ ಟ್ರ್ಯಾಕ್ಟರ್ಗಳನ್ನು ಅನ್ವೇಷಿಸುವಾಗ, ನೀವು ಮಹೀಂದ್ರಾ ಯುವರಾಜ್ 215 NXT ಅನ್ನು ಆಯ್ಕೆ ಮಾಡಬಹುದು. ಹೆಚ್ಚು ಶಕ್ತಿಯುತ ಟ್ರ್ಯಾಕ್ಟರ್ ಬೇಕಿದ್ದಲ್ಲಿ, ಮಹೀಂದ್ರಾ ಅರ್ಜುನ್ ಅಲ್ಟ್ರಾ-1 605 DI (Mahindra Arjun Ultra-1 605 DI) ಅಥವಾ ಮಹೀಂದ್ರಾ ನೋವೊ 755 DI (Mahindra Novo 755 DI) ಖರೀದಿಸಬಹುದು. ನಿಮ್ಮ ಕೃಷಿ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಟ್ರ್ಯಾಕ್ಟರ್ ಶ್ರೇಣಿಗಳನ್ನು ನಾವು ಹೊಂದಿದ್ದೇವೆ.

  • ಮಹೀಂದ್ರಾ ಜಿವೊ: ಕಾಂಪ್ಯಾಕ್ಟ್ ಟ್ರ್ಯಾಕ್ಟರ್ಗಳು, ಎಲ್ಲ ಕೃಷಿ ಕಾರ್ಯಾಚರಣೆಗಳಿಗೆ ಹೆಚ್ಚು ಸೂಕ್ತವಾಗಿದೆ
  • ಮಹೀಂದ್ರಾ XP ಪ್ಲಸ್: ಶಕ್ತಿಯುತ ಎಂಜಿನ್ಗಳನ್ನು ಹೊಂದಿರುವ ಮತ್ತು ಇಂಧನವನ್ನು ಕಡಿಮೆ ಪ್ರಮಾಣದಲ್ಲಿ ಬಳಸುವ ಕಠಿಣ ಟ್ರ್ಯಾಕ್ಟರ್ಗಳ ಶ್ರೇಣಿ
  • ಮಹೀಂದ್ರಾ SP ಪ್ಲಸ್: ಹೆಚ್ಚಿನ ಇಂಧನ ದಕ್ಷತೆ, ಹೆಚ್ಚಿನ ಗರಿಷ್ಠ ಟಾರ್ಕ್ ನೀಡುವ ಶಕ್ತಿಯುತ ಟ್ರ್ಯಾಕ್ಟರ್ ಗಳು
  • ಮಹೀಂದ್ರ ಯುವೋ: ಸುಧಾರಿತ ಹೈಡ್ರಾಲಿಕ್ಸ್, ಶಕ್ತಿಯುತ ಎಂಜಿನ್ ಮತ್ತು ವೈಶಿಷ್ಟ್ಯಗಳಿಂದ ಸಮೃದ್ಧವಾಗಿರುವ ಪ್ರಸರಣದಿಂದಾಗಿ ತಾಂತ್ರಿಕವಾಗಿ ಸುಧಾರಿತ ಟ್ರ್ಯಾಕ್ಟರ್ಗಳು ಉತ್ತಮ, ವೇಗದ ಕಾರ್ಯಾಚರಣೆಯನ್ನು ಖಾತ್ರಿಪಡಿಸುತ್ತವೆ
  • ಅರ್ಜುನ್ ನೋವೊ: ಸಾಗಣೆ, ಕೊಯ್ಲು, ಕಟಾವು ಸೇರಿದಂತೆ 40 ಕೃಷಿ ಕಾರ್ಯಾಚರಣೆಗಳನ್ನು ನಿರ್ವಹಿಸಲು ನಿರ್ಮಿಸಲಾಗಿದೆ.

ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯ ಟೋಲ್ ಫ್ರೀ ಸಂಖ್ಯೆ ಯಾವುದು? +

ಮಹೀಂದ್ರಾ ಟ್ರ್ಯಾಕ್ಟರ್ಸ್ ಟೋಲ್-ಫ್ರೀ ಸಂಖ್ಯೆ 18002100700 ಆಗಿದ್ದು, ಸಂವಹನಕ್ಕಾಗಿ ಇದು ದಿನದ 24 ಗಂಟೆಯೂ ಲಭ್ಯವಿರುತ್ತದೆ. ಯಾವುದೇ ಸಹಾಯಕ್ಕಾಗಿ [email protected] ಈ ವಿಳಾಸದಲ್ಲಿ ನೀವು ನಮ್ಮನ್ನು ಸಂಪರ್ಕಿಸಬಹುದು.

ಭಾರತದಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ಸ್ ಡೀಲರ್‌ಗಳು (ವಿತರಕರು) ಎಷ್ಟು ಮಂದಿ ಇದ್ದಾರೆ? +

ನಾವು ದೇಶಾದ್ಯಂತ 1,400 ಟಚ್ ‌ ಪಾಯಿಂಟ್‌ಗಳನ್ನು ಹೊಂದಿದ್ದೇವೆ. ಭಾರತದಲ್ಲಿ ಹತ್ತಿರದ ಮಹೀಂದ್ರಾ ಟ್ರ್ಯಾಕ್ಟರ್ಸ್ ಶೋರೂಮ್‌ಗಳು ಮತ್ತು ಟ್ರ್ಯಾಕ್ಟರ್ ಡೀಲರ್‌ಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಲೊಕೇಶನ್ (ಸ್ಥಳ) ನಮೂದಿಸಿ.

ಹೊಸದಾಗಿ ಬಿಡುಗಡೆ ಮಾಡಲಾದ ಟ್ರ್ಯಾಕ್ಟರ್‌ಗಳು ಯಾವುವು? +

ನಿರಂತರವಾಗಿ ಬದಲಾಗುತ್ತಿರುವ ಕೃಷಿ ಉದ್ಯಮದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯು ವಿವಿಧ ಮಾದರಿಗಳನ್ನು ನೀಡುತ್ತಿದೆ. SP ಪ್ಲಸ್: ಮಹೀಂದ್ರಾ SP ಪ್ಲಸ್ ಟ್ರ್ಯಾಕ್ಟರ್ಗಳು ತಮ್ಮ ವರ್ಗದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದು, ಅತಿ ಕಡಿಮೆ ಇಂಧನವನ್ನು ಬಳಸುತ್ತವೆ. ಶಕ್ತಿಯುತ ELS DI ಎಂಜಿನ್, ಹೆಚ್ಚಿನ ಗರಿಷ್ಠ ಟಾರ್ಕ್ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ ಕಾರಣಗಳಿಂದಾಗಿ, ಇದು ಎಲ್ಲ ಕೃಷಿ ಸಾಧನಗಳೊಂದಿಗೆ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮಾಡೆಲ್ಳು ಇಂತಿವೆ:

XP ಪ್ಲಸ್: ಮಹೀಂದ್ರಾ XP ಪ್ಲಸ್ ಶ್ರೇಣಿಯ ಟ್ರ್ಯಾಕ್ಟರ್ಗಳು ಹೆಚ್ಚಿನ ಗರಿಷ್ಠ ಟಾರ್ಕ್ ಅನ್ನು ಹೊಂದಿದ್ದು, ಇದು ಎಲ್ಲ ಉಪಕರಣಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅತ್ಯುತ್ತಮ ಬ್ಯಾಕಪ್ ಟಾರ್ಕ್ ಹೊಂದಿದ್ದು, ಸಾಟಿಯಿಲ್ಲದ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತವೆ. ಮಾಡೆಲ್ಗಳು ಇಂತಿವೆ:

ನಾನು ಭಾರತದಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಡೀಲರ್ ಆಗುವುದು ಹೇಗೆ? +

ಸುಮಾರು ನಾಲ್ಕು ದಶಕಗಳಿಂದ, ಭಾರತದ ನಮ್ಮ ಮಹೀಂದ್ರಾ ಟ್ರ್ಯಾಕ್ಟರ್ ವಿತರಕರಿಗೆ ನಾವು ಸಹಕರಿಸುತ್ತಿದ್ದೇವೆ ಮತ್ತು ಅವರೊಂದಿಗೆ ಬೆಳೆದಿದ್ದೇವೆ. ನೀವು ನಮ್ಮ ಡೀಲರ್‌ಶಿಪ್ ಪೋರ್ಟಲ್‌ಗೆ ಭೇಟಿ ನೀಡಬಹುದು, ಟ್ರ್ಯಾಕ್ಟರ್ ಶೋರೂಮ್ ಡೀಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ನಿಮ್ಮ ಸ್ಥಳವನ್ನು (ಲೊಕೇಶನ್) ಒದಗಿಸಬಹುದು ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆಯು ಮಿನಿ ಟ್ರ್ಯಾಕ್ಟರ್‌ಗಳನ್ನು ತಯಾರಿಸುತ್ತದೆಯೇ? +

ಮಹೀಂದ್ರಾ ಮಿನಿ ಟ್ರ್ಯಾಕ್ಟರ್ಗಳನ್ನು ಪ್ರಾಥಮಿಕವಾಗಿ ತೋಟಗಾರಿಕೆಯ ಬೆಳೆಗಳಲ್ಲಿ ಮತ್ತು ಹಣ್ಣಿನ ತೋಟಗಳಲ್ಲಿ ಕೃಷಿಗಾಗಿ ಬಳಸಲಾಗುತ್ತದೆ. ಅವುಗಳ ಗಾತ್ರ ಕಾಂಪ್ಯಾಕ್ಟ್ ಆಗಿರುತ್ತದೆ. ಹತ್ತಿ, ದ್ರಾಕ್ಷಿ, ಬೇಳೆಕಾಳುಗಳು, ದಾಳಿಂಬೆ, ಕಬ್ಬು, ನೆಲಗಡಲೆ ಮುಂತಾದ ವಿವಿಧ ಬೆಳೆಗಳಿಗೆ ಅವು ಸೂಕ್ತವಾಗಿವೆ. ಹೊಲವನ್ನು ಹರಗುವುದು ಮತ್ತು ಕಾರ್ಯಾಚರಣೆಯ ಅನಂತರದ ಕೆಲಸಕ್ಕೂ ನೀವು ಅವುಗಳನ್ನು ಬಳಸಿಕೊಳ್ಳಬಹುದು. ಮಹೀಂದ್ರಾ ಯುವರಾಜ್ 215 NXT ಮತ್ತು ಮಹೀಂದ್ರಾ ಜಿವೊ (JIVO) ಶ್ರೇಣಿ ಗರಿಷ್ಠ ಸಂಖ್ಯೆಯಲ್ಲಿ ಮರಾಟವಾಗುವ ನಮ್ಮ ಕೆಲವು ಕಾಂಪ್ಯಾಕ್ಟ್ ಟ್ರ್ಯಾಕ್ಟರ್ಗಳಾಗಿವೆ.

ನಾನು ಮಹೀಂದ್ರಾ ಟ್ರ್ಯಾಕ್ಟರ್ ಏಕೆ ಖರೀದಿಸಬೇಕು? +

37 ವರ್ಷಗಳಿಂದ, ನಾವು ರೈತರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ, ಅವರ ಅಗತ್ಯತೆಗಳು ಮತ್ತು ಸವಾಲುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತೇವೆ. ನಾವು ರೈತರ ವಿವಿಧ ಅಗತ್ಯಗಳಿಗೆ ಮತ್ತು ಎಲ್ಲಾ ವಿವಿಧ ರೀತಿಯ ಮಣ್ಣಿಗೆ ಸೂಕ್ತವಾದ ವ್ಯಾಪಕ ಶ್ರೇಣಿಯ ಟ್ರಾಕ್ಟರ್ಗಳನ್ನು ಒದಗಿಸುತ್ತೇವೆ. ನಮ್ಮ ಟ್ರಾಕ್ಟರುಗಳು ಕೈಗೆಟಕುವ ಬೆಲೆಯಲ್ಲಿ ಶಕ್ತಿ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತವೆ. ನಮ್ಮ ಶ್ರೇಣಿಯು ಮಹೀಂದ್ರ ಎಸ್ಪಿ ಪ್ಲಸ್ , ಮಹೀಂದ್ರ XP ಪ್ಲಸ್ , ಮಹೀಂದ್ರವನ್ನು ಲೈವ್ ಮಾಡಿ , ಮಹೀಂದ್ರ ಯುವೋ , ಮಹೀಂದ್ರ ಅರ್ಜುನ್ ಮತ್ತು ಮಹೀಂದ್ರ ನೊವೊ. ಮಹೀಂದ್ರಾ ಟ್ರ್ಯಾಕ್ಟರ್ಗಳನ್ನು ಖರೀದಿಸುವುದು ನಮ್ಮ ಶಕ್ತಿಶಾಲಿ ಎಂಜಿನ್ಗಳು, ಪ್ರಭಾವಶಾಲಿ ಮೈಲೇಜ್, AC ಕ್ಯಾಬಿನ್ ಮತ್ತು 15 HP ಯಿಂದ 74 HP ವರೆಗಿನ ಅಶ್ವಶಕ್ತಿಯ ಕಾರಣದಿಂದಾಗಿ ರೈತರು ತಮ್ಮ ವ್ಯವಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಅನುವು ಮಾಡಿಕೊಡುತ್ತದೆ.

ಮಹೀಂದ್ರಾ ಟ್ರ್ಯಾಕ್ಟರ್‌ಗಳನ್ನು ಎಲ್ಲಿ ತಯಾರಿಸಲಾಗುತ್ತದೆ? +

ಮಹೀಂದ್ರಾ ಟ್ರ್ಯಾಕ್ಟರ್ಗಳನ್ನು ಭಾರತದ ರುದ್ರಪುರ, ಜೈಪುರ, ನಾಗ್ಪುರ, ಜಹೀರಾಬಾದ್, ರಾಜ್ಕೋಟ್ ಈ ನಗರಗಳಲ್ಲಿ ತಯಾರಿಸಲಾಗುತ್ತದೆ. ಚೀನಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಉತ್ಪಾದನಾ ಘಟಕಗಳನ್ನೂ ನಾವು ಹೊಂದಿದ್ದೇವೆ.

ಮಹೀಂದ್ರಾ ಟ್ರ್ಯಾಕ್ಟರ್‌ಸ್‌ನಲ್ಲಿ ಉದ್ಯೋಗಕ್ಕೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು? +

ನೀವು ನಮ್ಮ ಕೆರಿಯರ್ (ವೃತ್ತಿ) ಪೋರ್ಟಲ್ಗೆ ಭೇಟಿ ನೀಡಬಹುದು ಮತ್ತು ಖಾಲಿ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಸ್ಥಳ ಮತ್ತು ಆದ್ಯತೆಯ ಉದ್ಯೋಗದ ಪ್ರಕಾರವನ್ನು ತಿಳಿಸುವ ಮೂಲಕ ಲಭ್ಯವಿರುವ ಉದ್ಯೋಗಾವಕಾಶಗಳಿಗಾಗಿ ನೀವು ಹುಡುಕಬಹುದು. ಸೂಕ್ತವಾದ ಉದ್ಯೋಗಾವಕಾಶ ಲಭ್ಯವಾದಾಗ ಅಧಿಸೂಚನೆಯನ್ನು ಪಡೆಯಲು ನೀವು ಅಲರ್ಟ್ ಅನ್ನೂ ರಚಿಸಬಹುದು.

ಮಹೀಂದ್ರಾ ಟ್ರ್ಯಾಕ್ಟರ್ಸ್ ಪ್ರಧಾನ ಕಚೇರಿ ಎಲ್ಲಿದೆ? +

ಮಹೀಂದ್ರಾ ಟ್ರ್ಯಾಕ್ಟರ್ಸ್ ಪ್ರಧಾನ ಕಚೇರಿ ಮುಂಬೈನಲ್ಲಿದೆ. ನಮ್ಮ ವಿಳಾಸ:


ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್.
ಕೃಷಿ ಸಲಕರಣೆ ವಲಯ,
ಕೃಷಿ ವಿಭಾಗ,
1ನೇ ಮಹಡಿ, ಮಹೀಂದ್ರಾ ಟವರ್ಸ್,
ಅಕುರ್ಲಿ ರಸ್ತೆ, ಕಂಡಿವಲಿ (ಪೂರ್ವ),
ಮುಂಬೈ - 400101.

ಮಹೀಂದ್ರಾ ಟ್ರ್ಯಾಕ್ಟರ್ಸ್ ಎಷ್ಟು ವಿಶ್ವಾಸಾರ್ಹವಾಗಿದೆ? +

ಮಹೀಂದ್ರಾ ಟ್ರ್ಯಾಕ್ಟರ್ಸ್ ಪ್ರಶಸ್ತಿ ವಿಜೇತ ಟ್ರ್ಯಾಕ್ಟರ್ ತಯಾರಕ ಕಂಪನಿಯಾಗಿದೆ. ಜಗತ್ತಿನಲ್ಲೇ ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್ (TQM) ಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಡೆಮಿಂಗ್ ಪ್ರೈಜ್ (Deming Prize) ಅನ್ನು ನಾವು ಸ್ವೀಕರಿಸಿದ್ದೇವೆ. ಜಪಾನ್ ಕ್ವಾಲಿಟಿ ಮೆಡಲ್ ಗೆದ್ದ ವಿಶ್ವದ ಮೊದಲ ಟ್ರ್ಯಾಕ್ಟರ್ ತಯಾರಕರೂ ನಾವೇ ಆಗಿದ್ದೇವೆ.ನಮ್ಮಿಂದ ಟ್ರ್ಯಾಕ್ಟರ್ ಖರೀದಿಸುವಾಗ, ನಿಮಗೆ ಉತ್ತಮ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಭರವಸೆಯನ್ನೂ ನೀಡಲಾಗುತ್ತದೆ. ಕಟ್ಟುನಿಟ್ಟಾದ


ಗುಣಮಟ್ಟದ ತಪಾಸಣೆ ಮತ್ತು ನಿಯಂತ್ರಣಗಳನ್ನು ನಾವು ಕೈಗೊಳ್ಳುತ್ತೇವೆ. ವಿವಿಧ ಬ್ರ್ಯಾಂಡ್ಗಳ ಅಡಿಯಲ್ಲಿ ವ್ಯಾಪಕ ಶ್ರೇಣಿಯ ಟ್ರ್ಯಾಕ್ಟರ್ಗಳನ್ನು ನಾವು ನೀಡುತ್ತೇವೆ. ಅವು ಇಂಧನ ದಕ್ಷತೆಯ ಜೊತೆಗೆ, ಉತ್ಪಾದಕತೆಯನ್ನು ಹೆಚ್ಚಿಸಲು ಅಗತ್ಯವಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿವೆ. ಬದಲಿ ಭಾಗಗಳು ಸುಲಭವಾಗಿ ಲಭ್ಯವಿವೆ ಮತ್ತು ವ್ಯಾಪಕವಾದ ಸರ್ವಿಸ್ ನೆಟ್ವರ್ಕ್ ಅನ್ನೂ ನಾವು ನೀಡುತ್ತೇವೆ. ಈ ಎಲ್ಲ ಕಾರಣಗಳಿಂದಾಗಿ ವಿಶ್ವದ ಅತ್ಯಂತ ವಿಶ್ವಾಸಾರ್ಹ, ಹೆಚ್ಚು ಮಾರಾಟವಾಗುವ ಟ್ರ್ಯಾಕ್ಟರ್ ತಯಾರಕರಾಗಿ ನಾವು ಹೊರಹೊಮ್ಮಿದ್ದೇವೆ.

ಮಹೀಂದ್ರಾ ಟ್ರ್ಯಾಕ್ಟರ್ಸ್ ಸಂಸ್ಥೆ ಹೇಗೆ ಪ್ರಾರಂಭವಾಯಿತು? +

ಮಹೀಂದ್ರಾ ಟ್ರ್ಯಾಕ್ಟರ್ಸ್ ಕುರಿತು 1963ರಲ್ಲಿ ಇಂಟರ್‌ನ್ಯಾಶನಲ್ ಹಾರ್ವೆಸ್ಟರ್ ಕಂಪನಿ ಮತ್ತು ವೋಲ್ಟಾಸ್ ಲಿಮಿಟೆಡ್‌ನೊಂದಿಗೆ ಮಹೀಂದ್ರಾ ಮತ್ತು ಮಹೀಂದ್ರಾದ ಜಂಟಿ ಉದ್ಯಮವಾಗಿ ದಿ ಇಂಟರ್‌ನ್ಯಾಶನಲ್ ಟ್ರ್ಯಾಕ್ಟರ್ ಕಂಪನಿ ಆಫ್ ಇಂಡಿಯಾ (ITCI) ಪ್ರಾರಂಭವಾಯಿತು. 1977ರಲ್ಲಿ ITCI ಮಹೀಂದ್ರಾ ಅಂಡ್ ಮಹೀಂದ್ರಾ ಜೊತೆಗೆ ವಿಲೀನಗೊಂಡಿತು ಮತ್ತು ಆ ಮೂಲಕ ಟ್ರ್ಯಾಕ್ಟರ್ ವಿಭಾಗವನ್ನು ಪ್ರಾರಂಭಿಸಿತು.

ಮಹೀಂದ್ರಾ ಟ್ರ್ಯಾಕ್ಟರ್ಸ್‌ನ ಸಂಸ್ಥಾಪಕರು ಯಾರು? +

ಮಹೀಂದ್ರಾ ಟ್ರ್ಯಾಕ್ಟರ್ಸ್ ಮಹೀಂದ್ರಾ ಸಮೂಹದ ಪ್ರಮುಖ ಕಂಪನಿಯಾದ ಮಹೀಂದ್ರಾ & ಮಹೀಂದ್ರಾದ ಟ್ರ್ಯಾಕ್ಟರ್ ವಿಭಾಗವಾಗಿದೆ. ಮಹೀಂದ್ರಾ ಸಮೂಹವನ್ನು ಸಹೋದರರಾದ ಜೆ.ಸಿ. ಮಹೀಂದ್ರಾ ಮತ್ತು ಕೆ.ಸಿ. ಮಹೀಂದ್ರಾ, ಗುಲಾಮ್ ಮೊಹಮ್ಮದ್ ಅವರ ಜೊತೆಗೂಡಿ ಸ್ಥಾಪಿಸಿದರು.

ಮಹೀಂದ್ರಾ ಟ್ರ್ಯಾಕ್ಟರ್ಸ್ ಭಾರತೀಯ ಕಂಪನಿಯೇ? +

ಹೌದು, ಮಹೀಂದ್ರಾ ಟ್ರ್ಯಾಕ್ಟರ್ಸ್ ಭಾರತೀಯ ಕಂಪನಿಯಾಗಿದೆ ಮತ್ತು ಕಳೆದ 37 ವರ್ಷಗಳಿಂದ ದೇಶದ ಅಗ್ರ ಟ್ರ್ಯಾಕ್ಟರ್ ತಯಾರಕರಾಗಿದ್ದು, ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಪರಿಮಾಣದ ಪ್ರಕಾರ ಇದು ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ತಯಾರಕರಾಗಿದ್ದು, ಉತ್ತರ ಅಮೆರಿಕ, ಮೆಕ್ಸಿಕೊ, ಬ್ರೆಜಿಲ್, ಟರ್ಕಿ, ದಕ್ಷಿಣ ಆಫ್ರಿಕಾ ಮತ್ತು ಜಪಾನ್ ಸೇರಿ 40ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವದಲ್ಲಿದೆ.