ಮಹೀಂದ್ರಾ ಫಾರ್ಮ್ ಇಕ್ಯುಪ್ಮೆಂಟ್ ಸೆಕ್ಟರ್ ನಲ್ಲಿ ನಾವು ಭಾರತೀಯ ರೈತರಿಗಾಗಿ ವಿಸ್ತೃತ ಶ್ರೇಣಿಯ ಪ್ರಗತಿಪರ ಕೃಷಿ ಯಂತ್ರಗಳನ್ನು ಪರಿಚಯಿಸುವ ಮೂಲಕ ಕಾರ್ಮಿಕರ ಕೊರತೆಯನ್ನು ಎದುರಿಸಲು, ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು, ಕೃಷಿಭೂಮಿ ಕಾರ್ಯನಿರ್ವಹಣೆಯ ವೆಚ್ಚವನ್ನು ತಗ್ಗಿಸಲು ಮತ್ತು ಬೆಳೆಯ ಇಳುವರಿಯನ್ನು ವೃದ್ಧಿಸಲು ಅವರಿಗೆ ನೆರವು ನೀಡುತ್ತಿದ್ದೇವೆ. ನಾವು ನಮ್ಮ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಮತ್ತು ಉತ್ಪಾದನಾ ಘಟಕಗಳಲ್ಲಿ ಕೃಷಿ ಉಪಕರಣಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಮಾಡುತ್ತೇವೆ.ನಮ್ಮ ರೈತರಿಗೆ ಅತ್ಯಾಧುನಿಕ ಕೃಷಿ ತಂತ್ರಜ್ಞಾನವನ್ನು ಒದಗಿಸುವುದಕ್ಕಾಗಿ ನಾವು ಭಾರತ ಮತ್ತು ವಿದೇಶದ ಅತ್ಯುತ್ತಮ ಸಂಸ್ಥೆಗಳೊಂದಿಗೆ ಸಹಯೋಗ ಸಾಧಿಸಿದ್ದೇವೆ. ಆಲೂಗಡ್ಡೆ ನೆಡುವುದು, ಬೈಹುಲ್ಲಿನ ಕಟ್ಟು ತಯಾರಿಸುವುದು, ಸಿಂಪಡಣೆ ಮತ್ತು ಭತ್ತದ ನೇಜಿ ನಾಟಿಯಲ್ಲಿ ಯಂತ್ರಗಳನ್ನು ಹೊರತರುವುದಕ್ಕಾಗಿ ನಾವು ಯೂರೋಪಿನ ಡೆವೂಲ್ಫ್, ಟರ್ಕಿಯ ಹಿಸಾರ್ ಲಾಲ್, ಭಾರತದ ಮಿತ್ರ ಮತ್ತು ಜಪಾನಿನ ಮಿತ್ಸುಬಿಶಿ ಅಗ್ರಿಕಲ್ಚರಲ್ ಮೆಶಿನರಿಯ ಜೊತೆ ಪಾಲುದಾರಿಕೆಯನ್ನು ಹೊಂದಿದ್ದೇವೆ.
ಭೂಮಿಯನ್ನು ಹದಗೊಳಿಸುವುದರಿಂದ ಹಿಡಿದು ಕೊಯ್ಲಿನ ನಂತರದ ಚಟುವಟಿಕೆಗಳ ತನಕ ಕಾರ್ಯನಿರ್ವಹಿಸುವುದಕ್ಕಾಗಿ, ವಿಸ್ತೃತ ಶ್ರೇಣಿಯ ಬೆಳೆಗಳು ಮತ್ತು ಕೃಷಿಭೂಮಿಯ ಗಾತ್ರಕ್ಕೆ ಸರಿಹೊಂದುವಂತೆ, ನಾವು ವಿವಿಧ ರೀತಿಯ ಟ್ರ್ಯಾಕ್ಟರ್ ಉಪಕರಣಗಳು ಮತ್ತು ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳನ್ನು ಹೊಂದಿದ್ದೇವೆ.ನಮ್ಮ ಉತ್ಪನ್ನಗಳನ್ನು, ರೈತರು ಸುಲಭವಾಗಿ ಕಾರ್ಯನಿರ್ವಹಿಸಲು ಮತ್ತು ಉತ್ಕೃಷ್ಟತೆ ಸಾಧಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿ ವಿತರಿಸಲಾಗುತ್ತದೆ.
ಮಹೀಂದ್ರಾದ ಉಪಕರಣಗಳು ಮತ್ತು ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳಿಗಾಗಿ ಇರುವ ಚಾನೆಲ್ ಪಾಲುದಾರರ ವಿಸ್ತೃತ ಜಾಲವು, ಸರಿಯಾಗಿ ತರಬೇತಾದ, ಸಂಪೂರ್ಣವಾಗಿ ಸಜ್ಜುಗೊಂಡ ಮತ್ತು ಸ್ಪಂದನೀಯ ಸರ್ವಿಸ್ ತಂಡದ ಮೂಲಕ ಬಿಡಿಭಾಗಗಳು ಮತ್ತು ಸಕಾಲಿಕ ಸೇವೆಯು ಸುಲಭವಾಗಿ ದೊರೆಯುಂತೆ ಮಾಡುತ್ತದೆ.
ನಾವು, ರಾಷ್ಟ್ರೀಯ ಮಟ್ಟದ ಚಾನೆಲ್ ಪಾಲುದಾರರ ಜಾಲದ ಮೂಲಕ ಟ್ರ್ಯಾಕ್ಟರ್ ಉಪಕರಣಗಳು ಮತ್ತು ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತೇವೆ.
ಟ್ರ್ಯಾಕ್ಟರ್ ಉಪಕರಣಗಳು ಮತ್ತು ಸ್ವಯಂಚಾಲಿತ ಕೃಷಿ ಯಂತ್ರೋಪಕರಣಗಳಿಗೆ 80%ದಷ್ಟು ನೇರ ಹಣಕಾಸು ಒದಗಿಸುವುದಕ್ಕಾಗಿ ನಾವು ಹಣಕಾಸು ಒದಗಿಸುವ ಅನೇಕ ಪ್ರಮುಖ ಸಂಸ್ಥೆಗಳ ಜೊತೆ ಸಹಭಾಗಿತ್ವವನ್ನು ಹೊಂದಿದೇವೆ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಸಮೀಪದ ಮಹೀಂದ್ರಾ ಟ್ರ್ಯಾಕ್ಟರ್ ಡೀಲರ್ ಅನ್ನು ಭೇಟಿಯಾಗಿ ಅಥವಾ ನಮ್ಮನ್ನು ಸಂಪರ್ಕಿಸಿ.