ಟ್ರಾಕ್ಟರ್ ಬೆಲೆ ವಿಚಾರಣೆ

Please agree form to submit

ಮಹೀಂದ್ರ ಯುವೋ 575 DI

ಹೊಸಯುಗದ ಮಹೀಂದ್ರಾ ಯುವೋ 575 DI 33.6 kW (45 HP) ಟ್ರ್ಯಾಕ್ಟರ್ ಆಗಿದ್ದು ಇದು ಕೃಷಿಯಲ್ಲಿ ಅನೇಕ ಹೊಸ ಸಾಧ್ಯತೆಗಳಿಗೆ ಬಾಗಿಲನ್ನು ತೆರೆದಿದೆ. ಇದರ ಆಧುನಿಕ ತಂತ್ರಜ್ಞಾನ ಶಕ್ತಿಶಾಲಿ 4 ಸಿಲಿಂಡರ್ ಇಂಜಿನ್ ಹೊಂದಿದ್ದು, ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗಿನ ಟ್ರಾನ್ಸ್ ಮಿಷನ್ ಮತ್ತು ಹೆಚ್ಚು ಕೆಲಸವನ್ನು ವೇಗವಾಗಿ ಮತ್ತು ಉತ್ತಮವಾಗಿ ಮಾಡಲು ಆಧುನಿಕ ಹೈಡ್ರಾಲಿಕ್ಸ್ ಗಳನ್ನು ಹೊಂದಿದೆ. ಮಹೀಂದ್ರಾ ಯುವೋ 575 ಡಿಐ ತನ್ನ ವರ್ಗದಲ್ಲೇ ಅತ್ಯುತ್ತಮವಾದ ಹೆಚ್ಚು ಬ್ಯಾಕ್-ಅಪ್ ಟಾರ್ಕ್, 12F+3R ಗೇರ್ ಗಳು, ಅಧಿಕ ಭಾರ ಎತ್ತುವ ಸಾಮರ್ಥ್ಯ, ಹೊಂದಿಸಬಹುದಾದ ಡಿಲಕ್ಸ್ ಸೀಟ್, ಶಕ್ತಿಶಾಲಿ ರ್ಯಾ ಪ್-ಅರೌಂಡ್ ಸ್ಪಷ್ಟ ಲೆನ್ಸ್ ಉಳ್ಳ ಹೆಡ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದ್ದು ಉಳಿದವುಗಳಿಗಿಂತ ಭಿನ್ನವಾಗಿದೆ. ಇದು 30 ವಿವಿಧ ಅಪ್ಲಿಕೇಶನ್ ಗಳನ್ನು ನಿರ್ವಹಿಸುವ ಮೂಲಕ, ನಿಮಗೆ ಯಾವುದೇ ಅಗತ್ಯವಿದ್ದರೂ ಅಲ್ಲಿ ಯುವೋ ಇರುವುದನ್ನು ಖಚಿತಪಡಿಸುತ್ತದೆ.

FEATURES

FEATURES

SPECIFICATIONS

ಮಹೀಂದ್ರ ಯುವೋ 575 DI
ಎಂಜಿನ್ ಪವರ್ (kW)33.6 kW (45 HP)
ಗರಿಷ್ಠ ಟಾರ್ಕ್ (Nm)178.68 Nm
ಗರಿಷ್ಠ PTO (kW)30.6 kW (41.1 HP)
ಗೇರುಗಳ ಸಂಖ್ಯೆ ಇಲ್ಲ 12 F + 3 R
ಮಹೀಂದ್ರ ಯುವೋ 575 DI
ಎಂಜಿನ್ ಪವರ್ (kW)33.6 kW (45 HP)
ಗರಿಷ್ಠ ಟಾರ್ಕ್ (Nm)178.68 Nm
ಗರಿಷ್ಠ PTO (kW)30.6 kW (41.1 HP)
ಗೇರುಗಳ ಸಂಖ್ಯೆ ಇಲ್ಲ 12 F + 3 R12 F + 3 R
ಸಿಲಿಂಡರ್‌ಗಳ ಸಂಖ್ಯೆ 4
Steering Type ಶಕ್ತಿ
Rear Tyre 13.6 x 28(Optional:-14.9 x 28)
Transmission Type ಪೂರ್ಣ ಸ್ಥಿರ ಜಾಲರಿ
Ground speeds (km/h) F - 1.45 km/h - 30.61 km/h R - 2.05 km/h / 5.8 km/h /11.2 km/h
Clutch ಸಿಂಗಲ್ ಕ್ಲಚ್ ಡ್ರೈ ಘರ್ಷಣೆ ಪ್ಲೇಟ್ (ಐಚ್ al ಿಕ: -ಡ್ಯುಯಲ್ ಕ್ಲಚ್-ಸಿಆರ್ಪಿಟಿಒ)
Hydraulics Lifting Capacity (kg) 1500

Related Tractors

ಮಹೀಂದ್ರ ಯುವೋ 575 DI FAQs

ಮಹಿಂದ್ರಾ YUVO 575 DI ಒಂದು ಗಟ್ಟಿಮುಟ್ಟಾದ 33.6 kW (45 HP) ಟ್ರಾಕ್ಟರ್ ಆಗಿದ್ದು ಸಾಧ್ಯವಿರುವ ಎಲ್ಲಾ ಬಗೆಯ ಕೃಷಿ ಪ್ರಯೋಜನಗಳಲ್ಲಿಯೂ ಬಳಸಬಹುದು. ಇದರ ಆಧುನಿಕ ಗುಣಲಕ್ಷಣಗಳಾದ ಅತ್ಯುನ್ನತ ನಿಖರತೆಯ ಹೈಡ್ರಾಲಿಕ್ಸ್, ಉತ್ತಮವಾದ ಇಂಜಿನ್ ಕೂಲಿಂಗ್, 1500 ಕೆಜಿಯ ಅಧಿಕವಾದ ಎತ್ತುವ ಸಾಮರ್ಥ್ಯ, ಫುಲ್ ಕಾನ್ಸ್ಟಂಟ್ ಮೆಶ್ ಟ್ರಾನ್ಸ್ ಮಿಷನ್, ಇತ್ಯಾದಿಗಳು ಮಹಿಂದ್ರಾ YUVO 575 DI hp ಯ ಹಿರಿಮೆಗೆ ಸಲ್ಲುವ ಸಂಗತಿಗಳಾಗಿವೆ


ಸುಧಾರಿತ ಹೈಡ್ರಾಲಿಕ್ಸ್, ಅಧಿಕವಾದ ಎತ್ತುವ ಸಾಮರ್ಥ್ಯ, ಫುಲ್ ಕಾನ್ಸ್ಟಂಟ್ ಮೆಶ್ ಟ್ರಾನ್ಸ್ ಮಿಷನ್, ಜೊತೆಗೆ 45 hp ಇಂಜಿನ್ ಪವರ್ ಉಳ್ಳ ಒಂದು ಟ್ರಾಕ್ಟರನ್ನು ಕೈಗೆಟುಕುವ ದರದಲ್ಲಿ ಪಡೆಯಲು ಅಷ್ಟು ಸುಲಭವಾದ ಸಂಗತಿಯಲ್ಲ. ಮಹಿಂದ್ರಾ YUVO 575 DI, ಈ ಎಲ್ಲಾ ಗುಣಗಳನ್ನು ಹೊಂದಿ, ಒಂದು ಶ್ರೇಷ್ಠ ಯಂತ್ರ ಎನಿಸಿದೆ. ಮಹಿಂದ್ರಾ YUVO 575 DI ದರವನ್ನು ನೀವೊಬ್ಬ ಅಧಿಕೃತ ಡೀಲರ್ ಬಳಿ ಕೇಳಿ ತಿಳಿದುಕೊಳ್ಳಬಹುದು.


ತನ್ನ ಸುಧಾರಿತವಾದ ಮತ್ತು ಹೆಚ್ಚಿನ ನಿಖರತೆಯುಳ್ಳ ಹೈಡ್ರಾಲಿಕ್ಸ್ ಮತ್ತು ತನ್ನ ಪರಮೋಚ್ಚ ಎತ್ತುವ ಸಾಮರ್ಥ್ಯದಿಂದ, ಮಹಿಂದ್ರಾ YUVO 575 DI ಯಾವುದೇ ಒಂದು ಕೃಷಿ ಯಂತ್ರೋಪಕರಣದ ಜೊತೆಗೆ ಬಳಸಲಿಕ್ಕೆ ತಕ್ಕುದಾಗಿದೆ. ಮಹಿಂದ್ರಾ YUVO 575 DI ಉಪಕರಣಗಳು ಯಾವುವೆಂದರೆ ಕಲ್ಟಿವೇಟರ್, ಡಿಸ್ಕ್ ಮತ್ತು ಎಂಬಿ ಪ್ಲೋ, ಸೀಡ್ ಡ್ರಿಲ್, ಪ್ಲಾಂಟರ್, ಗೈರೋವೇಟರ್, ಲೆವೆಲರ್, ಫುಲ್ ಕೇಜ್ ಮತ್ತು ಹಾಫ್ ಕೇಜ್ ವೀಲ್, ಟಿಪ್ಪಿಂಗ್ ಟ್ರೈಲರ್ ಇತ್ಯಾದಿ. are the cultivator, the disc and MB plough, seed drill, planter, gyrovator, leveller, full cage, and half cage wheel, tipping trailer, etc.


ಒಂದು ಸಕಾರಣ ಬೆಲೆಯೊಂದಿಗೆ, ಮಹಿಂದ್ರಾ YUVO 575 D ನ ವಾರಂಟಿಯು ಎರಡು ವರ್ಷಗಳ ಬಳಕೆಯ ಮೇಲೆ ಅಥವಾ ಜಮೀನು ಕೆಲಸದ 2000 ಗಂಟೆಗಳ ಪೈಕಿ, ಯಾವುದು ಮೊದಲು ಬರುವುದೋ ಅದಕ್ಕೆ ಅನ್ವಯವಾಗುತ್ತದೆ. ತನ್ನ ಮುಂದುವರೆದ 45 hp ಇಂಜಿನ್, 2-ಸ್ಪೀಡ್ PTO, ಇತ್ಯಾದಿ ಹೊಂದಿದ ಇದು, ಖರೀದಿಸಲು ಉತ್ತಮವಾಗಿದೆ.


ಒಂದು 33.6 kW (45 HP) ಟ್ರಾಕ್ಟರ್ ಆದಂತಹ ಇದು, ಒಂದು ಜಮೀನಿಗೆ ಬೇಕಾದ ಎಲ್ಲವನ್ನೂ ಕೊಡುತ್ತದೆ, ಮಹಿಂದ್ರಾ YUVO 575 DI ಒಂದು ಪವರ್ ಹೌಸ್ ಆಗಿದೆ. ಇದರ ಗುಣಲಕ್ಷಣಗಳಿಗೆ ನಾವು ಋಣಿಯಾಗಿರಬೇಕು, ಇದು ವ್ಯವಸಾಯದಲ್ಲಿ ಹೊಸ ದಾರಿಗಳಿಗೆ ಬಾಗಿಲು ತೆರೆಯುತ್ತಿದೆ. ಇದರಲ್ಲಿ 30 ಕ್ಕೂ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಬಹುದಾಗಿದ್ದು ಆಧುನಿಕ ಗುಣಲಕ್ಷಣಗಳ ಆಕರವಾಗಿದೆ. ಮಹಿಂದ್ರಾ YUVO 575 DI ಮೈಲೇಜ್ ಸಹಾ ಉತ್ತಮವಾಗಿದ್ದು ನಿಮ್ಮ ಡೀಲರ್ ವತಿಯಿಂದ ಮತ್ತಷ್ಟು ಹೆಚ್ಚಿನದನ್ನು ತಿಳಿದುಕೊಳ್ಳಬಹುದು.


ಎಲ್ಲಾ ಬಗೆಯಲ್ಲಿಯೂ ಮಹಿಂದ್ರಾ YUVO 575 DI ಒಂದು ಹೊಸಯುಗದ ಟ್ರಾಕ್ಟರ್ ಆಗಿದೆ. ಇದರಲ್ಲಿ ಆಧುನಿಕ ಗುಣಲಕ್ಷಣಗಳು ತುಂಬಿಕೊಂಡಿವೆ, ಅಧಿಕವಾದ ಎತ್ತುವ ಸಾಮರ್ಥ್ಯವಿದ್ದು, 30 ವಿವಿಧ ಬಗೆಯ ಪ್ರಯೋಜನಗಳಿಗೆ ಒಗ್ಗುತ್ತದೆ. ಈ ಎಲ್ಲಾ ಅಂಶಗಳೂ ಸೇರಿ ಮಹಿಂದ್ರಾ YUVO 575 DI ನ ಮರುಮಾರಾಟದ ಬೆಲೆಯನ್ನು ಮನಗೆಲ್ಲುವಂತೆ ಮಾಡಿವೆ. ನಿಮ್ಮ ಮಹಿಂದ್ರಾ ಟ್ರಾಕ್ಟರ್ ಡೀಲರ್ ವತಿಯಿಂದ ಹೆಚ್ಚಿನ ಮಾಹಿತಿ ಪಡೆಯಿರಿ.


ನಿಮ್ಮ ಮಹಿಂದ್ರಾ YUVO 575 DI ಅನ್ನು ಖರೀದಿಸಲು, ಕೇವಲ ಒಂದು ಅಧಿಕೃತವಾದ ಮಹಿಂದ್ರಾ YUVO 575 DI ಡೀಲರ್ ಬಳಿಗೇ ಹೋಗಿರಿ. ನಿಮ್ಮ ಹತ್ತಿರದ ಮಹಿಂದ್ರಾ ಡೀಲರನ್ನು ಪತ್ತೆ ಮಾಡಲಿಕ್ಕೆ, ಮಹಿಂದ್ರಾ Dealer Locator ಮೇಲೆ ಕ್ಲಿಕ್ ಮಾಡಿ, ಹಾಗೂ ಪ್ರದೇಶಾವಾರು, ರಾಜ್ಯ ಅಥವಾ ನಗರವಾರು ಫಿಲ್ಟರ್ ಮಾಡಿ


ಸರ್ವಬಗೆಯಲ್ಲೂ ನವಯುಗದ ಟ್ರಾಕ್ಟರ್ ಎನಿಸಿರುವ, ಮಹಿಂದ್ರಾ YUVO 575 DI ಬೇಸಾಯದ ಭೂಮಿಯಲ್ಲಿ ಒಂದು ನಿಜವಾದ ಕಾರ್ಯಸಾಧನ ಯಂತ್ರವಾಗಿದೆ ಇದು 30 ವಿಭಿನ್ನವಾದ ಅನ್ವಯಗಳನ್ನು ಹೊಂದಿದೆ, ಅಧಿಕವಾದ ಎತ್ತುವ ಸಾಮರ್ಥ್ಯವಿದೆ, ಮತ್ತು ಜಮೀನಿನಲ್ಲಿ ಹೆಚ್ಚು ಹೊತ್ತು ಕಳೆಯಲಿಕ್ಕಾಗಿ ಹೊಂದಿಸಬಹುದಾದ ಡಿಲಕ್ಸ್ ಸೀಟ್ ಸಹಾ ಹೊಂದಿದೆ. ಸರ್ವಿಸ್ ಕೂಡಾ ಸುಲಭಲಭ್ಯ. ನಿಮ್ಮ ಡೀಲರ್ ಕಡೆಯಿಂದ ಮಹಿಂದ್ರಾ YUVO 575 DI ಸರ್ವಿಸ್ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಿರಿ.


🍪 Cookie Consent

Cookies are not enabled on your browser, please turn them on for better experience of our website !

🍪 Cookie Consent

This website uses cookies, please read the Terms and Conditions.

.