ಹೊಸ ಯುಗದ ಮಹೀಂದ್ರಾ ಯುವೊವು ಕೃಷಿಯಲ್ಲಿ ಹೊಸ ಸಾಧ್ಯತೆಗಳಿಗೆ ಬಾಗಿಲನ್ನು ತೆರೆಯುತ್ತದೆ. ಎಲ್ಲಾ ಹೊಸ ವೈಶಿಷ್ಟ್ಯತೆಗಳು ಮತ್ತು ಸುಧಾರಿತ ಹೈಡ್ರಾಲಿಕ್ಗಳೊಂದಿಗೆ ಶಕ್ತಿಯುತ ಎಂಜಿನ್, ಟ್ರಾನ್ಸ್ಮಿಷನ್ ಅನ್ನು ಒಳಗೊಂಡಿರುವ ಇದರ ಆಧುನಿಕ ತಂತ್ರಜ್ಞಾನವು ಯಾವಾಗಲೂ ಹೆಚ್ಚು, ತ್ವರಿತವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಖಾತ್ರಿಗೊಳಿಸುತ್ತದೆ.
ಯಾವುದೇ ಪ್ರಕಾರದ ಮಣ್ಣಿನಲ್ಲಿ ಸರಿಯಾದ ಸಂವೇಧನೆಯೊಂದಿಗೆ ಕೆಲಸ ಮಾಡುತ್ತದೆ ಹಾಗೂ ಕೆಲಸವನ್ನು ಖಚಿತವಾಗಿ ಪೂರ್ಣಗೊಳಿಸುತ್ತದೆ. ಅದರ ವರ್ಗದಲ್ಲಿ ಅತ್ಯುತ್ತಮ ಲಿಫ್ಟ್ ಸಾಮರ್ಥ್ಯವನ್ನು ಹೊಂದಿರುತ್ತದೆ.
ಆಧುನಿಕ ಕಾನ್ಸ್ಟೆಂಟ್ ಮೆಶ್ ಟ್ರಾನ್ಸ್ಮಿಷನ್
ಆಧುನಿಕ ಕಾನ್ಸ್ಟೆಂಟ್ ಮೆಶ್ ಟ್ರಾನ್ಸ್ಮಿಷನ್ನಿಂದ ಕಾರ್ನಂತೆ ಸುಲಭವಾಗಿ ಗಿಯರ್ಗಳನ್ನು ಬದಲಾಯಿಸಿ
12 ಫಾರ್ವರ್ಡ್ + 3 ರಿವರ್ಸ್ ಗಿಯರ್ಗಳು
ಯಾವುದೇ ಸಾಧನದೊಂದಿಗೆ ಹೆಚ್ಚಿನ ವೇಗದೊಂದಿಗೆ ಕೆಲಸ ಮಾಡಲು ನಿಮಗೆ ಅವಕಾಶಮಾಡಿಕೊಡುತ್ತದೆ. ವಿಶೇಷ ಕಾರ್ಯಾಚರಣೆಗಳಿಗಾಗಿ ವಿಶೇಷ ಗಿಯರ್ ವೇಗಗಳು.
ಪಾವರ್ ಪುಲ್ ಎಂಜಿನ್
ಪಾವರ್ಫುಲ್ ಡಿಐ ಇಂಜಿನ್ ಇದು ಹೆಚ್ಚು ಪಾವರ್, ಹೆಚ್ಚು ಟಾರ್ಕ್ ಹಾಗೂ ಹೆಚ್ಚು ಪಿಟಿಒ ಪಾವರ್ ಅನ್ನು ಸೃಷ್ಟಿಸುತ್ತದೆ.
ಹೊಸ ಯುಗದ ಸ್ಟೈಲಿಂಗ್ ಹಾಗೂ ಆರಾಮ
ಫ್ಯೂಚರಿಸ್ಟಿಕ್ ಸ್ಟೈಲಿಂಗ್ ಹಾಗೂ ಎರ್ಗೊನಾಮಿಕ್ ರೀತಿಯಲ್ಲಿ ಡಿಸೈನ್ ಮಾಡಿರುವ ಸ್ಟೇಷನ್ ಹಾಗೂ ಪ್ಲ್ಯಾಟ್ಫಾರ್ಮ್ ಆಯಾಸವಿಲ್ಲದೇ ದೀರ್ಘಕಾಲದ ಕೆಲಸದ ಸಮಯವನ್ನು ಖಚಿತಪಡಿಸುತ್ತದೆ.