3 ಹೆಚ್ಚು ದಶಕಳಿಂದ ಮಹಿಂದ್ರಾ ಭಾರತದ ಅವಿವಾದೀತ ನಂ. 1 ಟ್ರ್ಯಾಕ್ಟರ್ ಬ್ರ್ಯಾಂಡ್ ಆಗಿದೆ ಮತ್ತು ಜಗತ್ತಿನಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಉತ್ಪಾದಕ ಕಂಪನಿಯಾಗಿದೆ. $19.4 ಬಿಲಿಯನ್ ಡಾಲರ್ ಮೌಲ್ಯದ ಮಹಿಂದ್ರಾ ಗ್ರೂಪ್ ನ ಭಾಗವಾಗಿದೆ. ಮಹಿಂದ್ರಾ ಟ್ರ್ಯಾಕ್ಟರ್ ಮಹಿಂದ್ರಾ ಕೃಷಿ ವಿಭಾಗದ ಅವಿಭಾಜ್ಯ ಅಂಗವಾಗಿದ್ದು ಇದು ಇದು ಮಹಿಂದ್ರಾದ ಕೃಷಿ ಉಪಕರಣ ವಿಭಾಗದ ಮುಂಚೂಣಿ (FES) ಘಟಕವಾಗಿದೆ.
40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಸ್ತಿತ್ವ ಸಾಧಿಸಿ ಜಗತ್ತಿನ ಏಕಮೇವ ಟ್ರ್ಯಾಕ್ಟರ್ ಎಂದು ಮಹಿಂದ್ರಾ ಗುಣಮಟ್ಟದಲ್ಲಿ ಅತ್ಯುನ್ನತೆ ಸಾಧಿಸಿ ಡೆಮಿಂಗ್ ಪ್ರಶಸ್ತಿ ಮತ್ತು ಜಪನೀಸ್ ಕ್ವಾಲಿಟಿ ಪದಕವನ್ನು ಪಡೆದುಕೊಂಡಿದೆ. ಮಹಿಂದ್ರಾದಲ್ಲಿ ವೈವಿಧ್ಯಮಯ ಶ್ರೇಣಯಿಲ್ಲಿ ಟ್ರ್ಯಾಕ್ಟರ್ ಗಳಿದ್ದು ಭಾರತೀಯ ಟ್ರ್ಯಾಕ್ಟರ್ ಉದ್ಯಮಕ್ಕೆ ಅನ್ವರ್ಥವಾಗಿದೆ. ಮಾರ್ಚ್ 2019ರಲ್ಲಿ 3 ಮಿಲಿಯನ್ ಟ್ರ್ಯಾಕ್ಟರ್ ಗಳನ್ನು ರಸ್ತೆಗೆ ಇಳಿಸಿದ ಭಾರತದ ಪ್ರಥಮ ಟ್ರ್ಯಾಕ್ಟರ್ ಎಂದು ಹೆಸರು ಗಳಿಸಿದೆ.
ತಲೆ ತಲಾಂತರಗಳಿಂದ ರೈತರ ಜೊತೆ ಸೇರಿ ಕೆಲಸ ಮಾಡಿರುವ ಮಹಿಂದ್ರಾ ಟ್ರ್ಯಾಕ್ಟರ್ ಗಳು ವಿಪರೀತ ಮತ್ತು ಮರೆಯಲಾಸಾಧ್ಯ ತಗ್ಗು ದಿನ್ನೆಗಳಲ್ಲಿ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತಿವೆ ಎಂದು ಹೆಸರು ಪಡೆದಿವೆ. ಮಹಿಂದ್ರಾ ಟ್ರ್ಯಾಕ್ಟರ್ ಗಳನ್ನು ಯಾವುದೇ ಸವಾಲುಗಳನ್ನು ಎದುರಿಸುವ "ಸದಾಕಾಲ ಬಲಶಾಲಿ" ಎಂದು ಕರೆಯುವುದರಲ್ಲಿ ಆಶ್ಚರ್ಯವಿಲ್ಲ. ರೈತರೊಂದಿಗಿನ ತನ್ನ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹಿಂದ್ರಾ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೆತ್ತಿಕೊಳ್ಳಲಿದೆ.
ನಮ್ಮ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಜಗತ್ತಿನಾದ್ಯಂತದ ರೈತರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸುವ ನಿಟ್ಟಿನಲ್ಲಿ ಸದಾಕಾಲ ಕಾರ್ಯೋನ್ಮುಖವಾಗಿದೆ.
ಮಹಿಂದ್ರಾ ಪ್ರಪ್ರಥಮವಾಗಿ ನೀಡಿರುವ ಬದ್ಧತೆ ಎಂದರೆ ಅದು ಗುಣಮಟ್ಟಕ್ಕೆ. ಪ್ರತಿಷ್ಟಿತ ಜಪಾನ್ ಕ್ವಾಲಿಟಿ ಮೆಡಲ್ ಮತ್ತು ಡೆಮಿಂಗ್ ಅಪ್ಲಿಕೇಷನ್ ಪುರಸ್ಕಾರವನ್ನು ಪಡೆದ ಜಗತ್ತಿನ ಏಕಮೇವ ಟ್ರ್ಯಾಕ್ಟರ್ ಉತ್ಪಾದಕ ಕಂಪನಿಯಾಗಿದ್ದರೆ ಅದು ನಾವು ಮಾತ್ರ.
ಮಹೀಂದ್ರದ ಮುಂಚೂಣಿಯಲ್ಲಿರುವುದು ಗುಣಮಟ್ಟಕ್ಕೆ ಸಮರ್ಪಣೆ. ಪ್ರತಿಷ್ಠಿತ ಜಪಾನ್ ಗುಣಮಟ್ಟದ ಪದಕ ಮತ್ತು ಡೆಮಿಂಗ್ ಅಪ್ಲಿಕೇಶನ್ ಬಹುಮಾನವನ್ನು ಗೆದ್ದ ವಿಶ್ವದ ಮೊದಲ ಮತ್ತು ಏಕೈಕ ಟ್ರಾಕ್ಟರ್ ತಯಾರಕರು ನಾವು.